ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಗೆ ಬಂದ ನವಿಲು

4:42 PM, Wednesday, May 15th, 2019
Share
1 Star2 Stars3 Stars4 Stars5 Stars
(No Ratings Yet)
Loading...

Peacockಮಂಗಳೂರು : ಮಂಗಳೂರು ಹೊರವಲಯದ ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲಧಿವಾಸ ಪೂಜೆಯಲ್ಲಿ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಸೋಮವಾರ ನವಿಲು ಯಾವುದೇ ಅಳುಕಿಲ್ಲದೇ ಭಕ್ತರ ಜೊತೆ ಪೂಜೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ. ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೇ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ಅಲ್ಲದೇ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು ಕಂಡು ಭಕ್ತರು ಸ್ವತಃ ದೇವರೇ ಬಂದಿರುವ ರೀತಿ ಕೈಮುಗಿದು ಭಕ್ತಿ ತೋರಿದರು. ಆದರೆ, ಸ್ಥಳೀಯರ ಮಾಹಿತಿ ಪ್ರಕಾರ, ಅದೇ ನವಿಲು ದಿನವೂ ಪೂಜೆ ಸಂದರ್ಭದಲ್ಲಿ ದೇಗುಲದ ಒಳಭಾಗಕ್ಕೆ ಬಂದು ನಿಲ್ಲುತ್ತೆ ಎಂದು ಹೇಳಿದ್ದಾರೆ. ಜೊತೆಗೆ ದೇವರ ನೈವೇದ್ಯ ಸೇವನೆ ಮಾಡುವುದಂತೆ. ಏನಿದ್ದರೂ, ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯನ ವಾಹನವೇ ಬಂದು ನಿಂತಿದ್ದು ಭಕ್ತರಿಗೆ ಪಾಲಿಗೆ ವಿಶೇಷವೇ ಸರಿ. ದಕ್ಷಿಣ ಕನ್ನಡ ರಣಕಣ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English