ಮಂಗಳೂರು : ಏರ್ ಇಂಡಿಯಾ IX 812 ವಿಮಾನ ದುರಂತದ ವಾರ್ಷಿಕ ಸ್ಮರಣಾರ್ಥ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಗರ ಹೊರವಲಯದ ಕೂಳೂರು ಸೇತುವೆ ಸಮೀಪದ ಉದ್ಯಾನವನದಲ್ಲಿ ಬುಧವಾರ ನಡೆಯಿತು.
ದ.ಕ.ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ದ.ಕ.ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದ.ಕ.ಜಿ.ಪಂ. ಸಿಇಒ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಡಿಎಚ್‌ಒ ಡಾ. ರಾಮಕೃಷ್ಣರಾವ್ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದುರಂತ ಸಂಭವಿಸಿ ಇಂದಿಗೆ 9 ವರ್ಷ ಸಂದಿವೆ. ಇದೊಂದು ಮರೆಯಲಾಗದ ಮತ್ತು ಅತ್ಯಂತ ನೋವಿನ ಘಟನೆಯಾಗಿದೆ ಮತ್ತು ಈ ದುರಂತ ನಮಗೆ ಸಾಕಷ್ಟು ಪಾಠ ಕಲಿಸಿದೆ. ದುರ್ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
Click this button or press Ctrl+G to toggle between Kannada and English