ಮಂಗಳೂರು : ಭಗ್ನಪ್ರೇಮಿ ಯಿಂದ ಇರಿತಕ್ಕೊಳಗಾದ ದೀಕ್ಷಾ ಕೋಟ್ಯಾನ್ (20) ಸ್ಥಿತಿ ಗಂಭೀರವಾಗಿದ್ದು ಈಗಾಗಲೇ 15 ಬಾಟಲಿ ಗಳಷ್ಟು ರಕ್ತ ನೀಡಲಾಗಿದ್ದು ಆಕೆ ಜೀವನ್ಮರಣ ಸ್ಥಿತಿಯಲ್ಲಿ ದೇರಳಕಟ್ಟೆಯ ಕೆ. ಎಸ್ ಹಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿಡಲಾಗಿದೆ.
ಸುಶಾಂತ್ ಮತ್ತು ದೀಕ್ಷಾ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಒಳ್ಳೆಯ ನ್ರತ್ಯಪಟುವಾಗಿದ್ದ, ಜೊತೆಗೆ ನೃತ್ಯ ತರಬೇತುದಾರನಾಗಿದ್ದ. ದೇವದಾಸ್ ಕಾಪಿಕಾಡ್ ಅವರ ಚಿತ್ರದಲ್ಲಿಅರ್ಜುನ್ ಜೊತೆ ತಾಸೆದ ಪೆಟ್ಟುಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನ ಎಂಬ ಹಾಡಿಗೂ ಹೆಜ್ಜೆ ಹಾಕಿದ್ದ.
ಕೆಲವು ತಿಂಗಳುಗಳ ಹಿಂದೆ ಕಾರ್ಕಳದ ಕಾಲೇಜ್ ಕ್ಯಾಂಪಸ್ ನಲ್ಲಿ ಯಾವಾಗ ದೀಕ್ಷಾ ಆತನನ್ನು ದೂರ ಮಾಡಲು ಪ್ರಯತ್ನಿಸಿದಳೋ ಆಂದಿನಿಂದ ಸುಶಾಂತ್ ಆಕೆಯನ್ನು ಮುಗಿಸಿ ಬಿಡಲು ಯೋಜನೆ ಹಾಕಿದ್ದ. ಆದರೂ ಕೊನೆಯ ಬಾರಿ ಜೂನ್ 28 ರಂದು ಸಂಜೆ ಆಕೆಯನ್ನು ಹಿಂಬಾಲಿಸಿ ತನ್ನ ಪ್ರೀತಿಯನ್ನು ಒಪ್ಪುವಂತೆ ಒತ್ತಾಯಿಸಿದ್ದ.
ಜೂನ್ 28 ಶುಕ್ರವಾರ ಸಂಜೆ ಇನ್ನೇನು ಮನೆ ತಲುಪಬೇಕು ಅನ್ನುವಷ್ಟರಲ್ಲಿ ಸುಶಾಂತ್ ಸ್ಕೂಟರಿನಲ್ಲಿ ಬಂದು ಕಾಲೇಜಿನಿಂದ ಮರಳುತ್ತಿದ್ದ ದೀಕ್ಷಾಳಿಗೆ ದೇರಳಕಟ್ಟೆಯ ಬಗಂಬಿಲದಲ್ಲಿ 12 ಬಾರಿ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಲ್ಲದೆ ತಾನೂ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿದ್ಯಾರ್ಥಿನಿ ದೀಕ್ಷಾ ಬೊಬ್ಬಿಡುತ್ತಾ ರಸ್ತೆಗೆ ಉರುಳಿದರೂ ಬಿಡದ ದುಷ್ಕರ್ಮಿ ಸುಶಾಂತ್ ಅಲ್ಲಿಯೂ ಚೂರಿಯಿಂದ ಕಾಲು, ಸೊಂಟದ ಭಾಗಕ್ಕೆ 12 ಬಾರಿ ಚುಚ್ಚಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿ ಬೊಬ್ಬೆಕೇಳಿ ಸ್ಥಳೀಯ ಕೆ.ಎಸ್ ಹೆಗ್ಡೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರು ಜಮಾಯಿಸಿ ಸುಶಾಂತ್ ನನ್ನು ಸಮಾಧಾನಿಸಲು ಯತ್ನಿಸಿದರೂ, ಅವರಿಗೂ ಬೆದರಿಕೆಯೊಡ್ಡಿದ ಸುಶಾಂತ್ ಮತ್ತೆ ಧೀಕ್ಷಾಳ ಮೇಲೆ ಚೂರಿಯಿಂದ ಚುಚ್ಚುತ್ತಲೇ ತನ್ನ ಕುತ್ತಿಗೆಯನ್ನು ಅದೇ ಚೂರಿಯಿಂದ ಸೀಳಳು ಆರಂಭಿಸಿದ್ದಾನೆ. ಆಸ್ಪತ್ರೆ ಕಟ್ಟಡದಲ್ಲಿದ್ದ ಹಾಗೂ ರಸ್ತೆಯಲ್ಲೇ ಇದ್ದ ಮಂದಿ ಘಟನೆಗೆ ಸಾಕ್ಷಿಯಾದರೂ, ಕೃತ್ಯ ನಿಲ್ಲಿಸಲು ಅಸಹಾಯಕರಾಗಿದ್ದರು. 15 ನಿಮಿಷಗಳ ಕಾಲ ಕೃತ್ಯವನ್ನು ಮುಂದುವರಿಸುತ್ತಲೇ ಇದ್ದವ ಬಳಿಕ ತಾನೂ ವಿದ್ಯಾರ್ಥಿನಿ ಮೇಲೆ ಬಿದ್ದು ಆಕೆಯನ್ನು ಅಪ್ಪುತ್ತಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ದಾದಿಯರು ಸುಶಾಂತ್ ನನ್ನು ಸಮಾಧಾನಿಸಲು ಯತ್ನಿಸಿ ಬಳಿಕ ವಿದ್ಯಾರ್ಥಿನಿ ಧೀಕ್ಷಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಹದ 12 ಜಾಗಗಳಲ್ಲಿ ಇರಿತಕ್ಕೊಳಗಾದ ವಿದ್ಯಾರ್ಥಿನಿಗೆ ವಿಪರೀತ ರಕ್ತಸ್ರಾವವಾಗಿದೆ. ಈ ಸುಮಾರು ದವರೆಗೆ 15ಬಾಟಲಿ ರಕ್ತವನ್ನು ನೀಡಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿ ಆರೋಗ್ಯ ಸ್ಥಿತಿ ಮುಂದುವರಿದಿದೆ. ಸುಶಾಂತ್ ಸ್ಥಿತಿ ಇದೀಗ ಸುಧಾರಿಸುತ್ತಿದೆ ಎನ್ನಲಾಗಿದೆ.
ದೀಕ್ಷಾ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುವ ಸಂದರ್ಭ ಸುಶಾಂತ್ ಅಲ್ಲಿನ ವಿದ್ಯಾರ್ಥಿಗಳಿಗೆ ಡ್ಯಾನ್ಸ್ ತರಬೇತುದಾರನಾಗಿ ಆಗಮಿಸಿದ್ದ. ಅಲ್ಲಿ ಇಬ್ಬರ ನಡುವೆ ಆರಂಭವಾದ ಸ್ನೇಹ ಪ್ರೀತಿಯತ್ತ ತಿರುಗಿತ್ತು. ಇಬ್ಬರೂ ಜತೆಗಿರುವ ಫೋಟೋಗಳು ಫೇಸ್‍ಬುಕ್ ನಲ್ಲಿ ಈಗಲೂ ಇರುವುದು ಇವರಿಬ್ಬರ ಪ್ರೀತಿಗೆ ಸಾಕ್ಷಿ . ಮೂರು ವರ್ಷಗಳ ಕಾಲ ಇಬ್ಬರ ನಡುವಿನ ಪ್ರೀತಿ ಗಾಢವಾಗಿಯೇ ಇತ್ತು ನಡುವೆ ಗಲಾಟೆಗಳು ನಡೆದರೂ ಇಬ್ಬರೂ ಜತೆಯಾಗಿಯೇ ಇದ್ದರು. ಸುಶಾಂತ್ ಮಂಗಳೂರಿನ ಖ್ಯಾತ ಡ್ಯಾನ್ಸ್ ತಂಡ ಆರ್ಯನ್ಸ್ ನಲ್ಲಿ ಮೂರು ವರ್ಷಗಳ ಹಿಂದಿದ್ದರೆ, ಬಳಿಕ ಮ್ಯಾಡ್ ಡ್ಯಾನ್ಸ್ ತಂಡದಲ್ಲಿ ತರಬೇತುದಾರನಾಗಿದ್ದನು.
ಯಾವಾಗ ಜಪಾನ್ ಮಂಕಿ ಜೊತೆ ಸೇರಿಕೊಂಡನೋ ಅಂದಿನಿಂದ ಇವರ ಪ್ರೀತಿಗೆ ಹಿನ್ನಡೆ ಉಂಟಾಯಿತು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹೋಂಸ್ಟೇ ಪ್ರಕರಣಕ್ಕೆ ಸಂಭಂದಿಸಿದಂತೆ ಜಪಾನ್ ಮಂಕಿ ಮತ್ತು ಹಿಂದೂ ಮುಖಂಡರ ನಡುವೆ ನಡೆದ ಹಲ್ಲೆ ಪ್ರಕರಣದಲ್ಲೂ ಈತ ಗುರುತಿಸಿಕೊಂಡು ಜೈಲಿನಲ್ಲಿದ್ದ.
ಕಳೆದ ಕೆಲತಿಂಗಳ ಹಿಂದೆ ಇದೇ ಹುಡುಗಿ ದೀಕ್ಷಾಳ ವಿಚಾರಕ್ಕೆ ಸಂಬಂಧಿಸಿದಂತೆ ಸುಶಾಂತ್ ಮೇಲೆ ಉಡುಪಿ ಜಿಲ್ಲೆಯ ಠಾಣೆಯಲ್ಲಿಯೊಂದಲ್ಲಿ ಪ್ರಕರಣ ದಾಖಲಾಗಿದ್ದು, ಒಂದು ದಿನ ಸುಶಾಂತ್ ಜೈಲಿನಲ್ಲಿಯೂ ಇದ್ದ.
ಸುಶಾಂತ್ ಮತ್ತು ದೀಕ್ಷಾ ಒಂದು ಸಮಯದಲ್ಲಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಆದರೆ ಕಾರ್ಕಳದ ಕಾಲೇಜ್ ಕ್ಯಾಂಪಸ್ ನಲ್ಲಿಇವರಿಬ್ಬರ ನಡುವಿನಲ್ಲಿ ಗಲಾಟೆಗಳು ನಡೆದು ಪ್ರೀತಿ ದೂರವಾಗಿದ್ದು ಇದೇ ಕಾರಣ ಸುಶಾಂತ್ ಕೋಪಗೊಂಡಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ತಾನೂ ಪ್ರೀತಿಸುತ್ತಿದ್ದ ಯುವತಿ ದೀಕ್ಷಾಳಿಗೂ ಚೂರಿ ಇರಿದು ತಾನೂ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ನಗರದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿ, ಯುವತಿ ಗಂಭೀರವಾಗಿದ್ದು, ಸುಶಾಂತ್ ಚೇತರಿಸಿಕೊಳ್ಳುತ್ತಿದ್ದಾನೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English