ಟೈಲರಿಂಗ್ ಕೆಲಸಕ್ಕೆ ಹೋದ ಯುವತಿ ನಾಪತ್ತೆ

8:39 PM, Saturday, July 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Divya ಮಂಗಳೂರು : ಟೈಲರಿಂಗ್ ಕೆಲಸಕ್ಕೆ ಹೋದಾಕೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವ್ಯಾ(20) ಎಂಬಾಕೆ ಕಡಬ ತಾಲೂಕು 102 ನೆಕ್ಕಿಲಾಡಿ ಗ್ರಾಮದ ಗುರಿಯಡ್ಕ ಎಂಬಲ್ಲಿಂದ ಜುಲೈ 3 ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕಡಬಕ್ಕೆ ಟೈಲರಿಂಗ್ ಕೆಲಸಕ್ಕೆಂದು ಹೋದವರು ಕೆಲಸಕ್ಕೂ ಹೋಗದೇ ರಾತ್ರಿ ವಾಪಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ: ಪ್ರಾಯ 20 ವರ್ಷ, ಎತ್ತರ 135, ಕಪ್ಪು ಗುಂಗೂರು ಕೂದಲು, ಬಿಳಿ ಮೈಬಣ್ಣ, ಉದ್ದ ಮುಖ, ತೆಳ್ಳಗೆ ಮೈಕಟ್ಟು, ನೀಲಿ ಬಣ್ಣದ ಉದ್ದ ಟಾಪ್ ಧರಿಸಿರುತ್ತಾರೆ, ಮಾತನಾಡುವ ಭಾಷೆ ಕನ್ನಡ, ತುಳು.

ಈ ಚಹರೆಯುಳ್ಳ ಯುವತಿಯ ಬಗ್ಗೆ ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ: 08254260044, 08251251055, 8251230500, 8242220500, 8242220501 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಕಡಬ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English