ತುಳು ಕಾವ್ಯಗಳ ಪ್ರಚಾರಕ್ಕೆ ಕೈಜೋಡಿಸುವ : ತಾರಾನಾಥ ಶೆಟ್ಟಿ ಬೋಳಾರ

11:28 AM, Tuesday, July 30th, 2019
Share
1 Star2 Stars3 Stars4 Stars5 Stars
(No Ratings Yet)
Loading...

tulu ಮಂಗಳೂರು  : ತುಳುನಾಡಿನ ವಾಲ್ಮೀಕಿ ಎಂದೇ ಖ್ಯಾತರಾದ ಮಂದಾರ ಕೇಶವ ಭಟ್ಟರು ಬರೆದ ಮಂದಾರ ರಾಮಾಯಣ ವಾಚನ ಪ್ರವಚನ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಕೆಲಸಗಳು ತುಳುನಾಡಿನ ಪ್ರತಿ ದೇವಸ್ಥಾನಗಳಲ್ಲೂ ನಡೆಯಬೇಕು. ಮುಂದಿನ ವರ್ಷದಿಂದ ನಮ್ಮ ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಂದಾರ ರಾಮಾಯಣ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸುವೆ. ಹಾಗೆ ಪ್ರತಿಯೊಬ್ಬರು ತುಳುವಿನಲ್ಲಿರುವ ಮಹಾಕಾವ್ಯಗಳ ಪ್ರಸಾರಕ್ಕೆ ಕೈಜೋಡಿಸಬೇಕು. ಇವುಗಳನ್ನು ಮಾತ್ರ ಉಳಿಸಿ ಬೆಳೆಸಿದರೆ ತುಳುವಿಗೆ ಶ್ರೇಷ್ಠ ಸ್ಥಾನಮಾನಗಳು ಸಿಗುವುದು ಖಚಿತ ಎಂದು ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಮೊಕ್ತೇಸರರಾದ ತಾರಾನಾಥ ಶೆಟ್ಟಿ ಬೋಳಾರ ಹೇಳಿದರು.

ಅವರು ತುಳು ವರ್ಲ್ಡ್ ಮಂಗಳೂರು ಹಾಗೂ ತುಳುವೆರೆ ಕೂಟ ಶಕ್ತಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣದ ಪ್ರವಚನ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರವಿಂದ ಮೋಟರ್ಸ್ ನ ಸೀನಿಯರ್ ಸೇಲ್ಸ್ ಮ್ಯಾನೇಜರ್ ರಾಜೇಶ್ ಗಟ್ಟಿ, ಮಹೇಶ್ ಮೋಟರ್ಸ್ ಮಾಲಕರಾದ ಜಯರಾಮ ಶೇಖ, ಸುರಭಿ ಹೋಟೆಲ್ ಮಾಲಕರಾದ ಕರುಣಾಕರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ದುರ್ಗಾ ಮೆನೋನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತುಳುವೆರೆ ಕೂಟ ಶಕ್ತಿನಗರದ ಉಪಾಧ್ಯಕ್ಷ ಎನ್ ವಿಶ್ವನಾಥ್ ಸ್ವಾಗತಿಸಿ ಡಾ ರಾಜೇಶ್ ಆಳ್ವ ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಂದಾರ ರಾಮಾಯಣದ ಮೂರನೇ ಅಧ್ಯಾಯ ಅಜ್ಜರೆ ಶಾಲೆ ಯ ವಾಚನವನ್ನು ಯಜ್ಞೇಶ್ ರಾವ್ ಹಾಗೂ ದಿವ್ಯ ಕಾರಂತ್ ನಡೆಸಿದರು. ಸರ್ಪಂಗಳ ಈಶ್ವರ ಭಟ್ ಪ್ರವಚನ ನಡೆಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English