ಉಜಿರೆ: ತುಳುನಾಡಿನ ನಂಬಿಕೆ-ನಡವಳಿಕೆಯನ್ನು ಪ್ರತಿಬಿಂಬಿಸುವ ಆಟಿಡೊಂಜಿ ವಿಶೇಷ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿಆಯೋಜಿಸಲಾಯಿತು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅವರು ಚೆನ್ನೆ ಮಣೆ ಆಟ ಆಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ನಾಟಕ ಪ್ರದರ್ಶನ, ವಸ್ತು ಪ್ರದರ್ಶನ, ಆಟಿ ತಿಂಗಳ ಮಹತ್ವವನ್ನು ಪ್ರತಿ ಬಿಂಬಿಸುವ ಭಿತ್ತಿ ಪತ್ರ ಪ್ರದರ್ಶನ, ತುಳು ಹಾಡುಗಳು, ಶೋಭಾನೆ, ಪಾಡ್ದನ, ಗ್ರಾಮೀಣ ಆಟಗಳಾದ ಕಲ್ಲಾಟ, ಜಿಬಿಲಿ, ಚೆನ್ನೆ ಮಣೆ, ಗೋಲಿ, ಕವಡೆ ಆಟಗಳನ್ನು ಆಡಿ ಮಕ್ಕಳು ಆನಂದಿಸಿದರು.
ಮಾವಿನ ಎಲೆ, ಅಡಿಕೆ ಹಾಳೆ ಮತ್ತುತೆಂಗಿನ ಗರಿಗಳ ಹೂಗುಚ್ಛ ತಯಾರಿಸಿ, ತಳಿರು-ತೋರಣಗಳಿಂದ ಶಾಲಾ ಮುಂಭಾಗ ಮತ್ತು ವೇದಿಕೆಯನ್ನುಅಲಂಕರಿಸಲಾಗಿತ್ತು.
ಗ್ರಾಮೀಣ ಸಾಂಪ್ರದಾಯಿಕಉಡುಗೆ-ತೊಡುಗೆಯೊಂದಿಗೆ ವಿದ್ಯಾರ್ಥಿಗಳು ಶಾಲೆಗೆ ಬಂದರು.
ಕೋಳಿ ಅಂಕ, ಕಂಬಳ, ಭೂತದ ಕೋಲ, ಆಟಿ ಕಳೆಂಜ, ಗದ್ದೆ ಬೇಸಾಯದ ದೃಶ್ಯಾವಳಿಗಳನ್ನು ಸಿ.ಡಿ. ಮೂಲಕ ಪ್ರದರ್ಶಿಸಲಾಯಿತು.
ಡಿ. ಹರ್ಷೇಂದ್ರಕುಮಾರ್, ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಮೊದಲಾದವರು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳನ್ನು ವೀಕ್ಷಿಸಿ ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ, ಎಂ.ವಿ. ಮತ್ತು ಶಿಕ್ಷಕ ವೃಂದದವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿತು.
Click this button or press Ctrl+G to toggle between Kannada and English