ಸುಂದರ ಪರಿಸರದೊಂದಿಗೆ ಸುಂದರ ಬದುಕು ಸಾಧ್ಯ

Thursday, January 2nd, 2020
ujire

ಉಜಿರೆ : ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದಾಗ ಸ್ವಚ್ಛ ಪರಿಸರ ನಿರ್ಮಾಣವಾಗುತ್ತದೆ. ಕಸ ಸೃಷ್ಟಿ ಮಾಡುವುದು ಮತ್ತು ಬಿಸಾಡುವುದು ನಮ್ಮ ಸಂಸ್ಕೃತಿಅಲ್ಲ. ಸುಂದರ ಪರಿಸರದೊಂದಿಗೆ ಸುಂದರ ಹಾಗೂ ನೆಮ್ಮದಿಯ ಬದುಕು ಸಾಧ್ಯಎಂದು ಧರ್ಮಸ್ಥಳದ ಶ್ರದ್ಧಾ ಅಮಿತ್ ಹೇಳಿದರು. ಉಜಿರೆಯಲ್ಲಿ ಎಸ್.ಡಿ.ಎಂ. ಮಹಿಳಾ ಕೈಗಾರಿಕಾತರಬೇತಿ ಸಂಸ್ಥೆಯಲ್ಲಿ ಬುಧವಾರ ಅವರು, ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಸ್ವಚ್ಛತಾ ಅಭಿಯಾನದಲ್ಲಿ ಹಳೆ ಬಟ್ಟೆಗಳಿಂದ ತಯಾರಿಸಿದ ಚೀಲಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನದಿ ನೀರನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸದಂತೆ ಹಿರಿಯರು ಮಕ್ಕಳಲ್ಲಿ […]

ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ

Tuesday, July 30th, 2019
sdm ujire

ಉಜಿರೆ: ತುಳುನಾಡಿನ ನಂಬಿಕೆ-ನಡವಳಿಕೆಯನ್ನು ಪ್ರತಿಬಿಂಬಿಸುವ ಆಟಿಡೊಂಜಿ ವಿಶೇಷ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿಆಯೋಜಿಸಲಾಯಿತು. ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅವರು ಚೆನ್ನೆ ಮಣೆ ಆಟ ಆಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ನಾಟಕ ಪ್ರದರ್ಶನ, ವಸ್ತು ಪ್ರದರ್ಶನ, ಆಟಿ ತಿಂಗಳ ಮಹತ್ವವನ್ನು ಪ್ರತಿ ಬಿಂಬಿಸುವ ಭಿತ್ತಿ ಪತ್ರ ಪ್ರದರ್ಶನ, ತುಳು ಹಾಡುಗಳು, ಶೋಭಾನೆ, ಪಾಡ್ದನ, ಗ್ರಾಮೀಣ ಆಟಗಳಾದ ಕಲ್ಲಾಟ, ಜಿಬಿಲಿ, ಚೆನ್ನೆ ಮಣೆ, ಗೋಲಿ, ಕವಡೆ ಆಟಗಳನ್ನು ಆಡಿ ಮಕ್ಕಳು […]

ಉಜಿರೆ : ಸ್ಥೂಲಕಾಯದಿಂದ ಹೃದಯ ಸಂಬಂಧಿ ಹಾಗೂ ಮಧುಮೇಹ ರೋಗ

Friday, March 15th, 2019
Ujire

ಉಜಿರೆ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 1989 ರಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಉಜಿರೆಯಲ್ಲಿ ಪ್ರಾರಂಭಗೊಂಡ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಇಂದಿನಿಂದ (ಶುಕ್ರವಾರ) ಎರಡು ದಿನ ಸ್ಥೂಲಕಾಯದಿಂದ ಬರುವ ಹೃದಯ ಸಂಬಂಧಿ ಹಾಗೂ ಮಧುಮೇಹ ರೋಗಗಳಲ್ಲಿ ಜೀವನ ಶೈಲಿಯ ಪಾತ್ರ ಎಂಬ ವಿಷಯದಲ್ಲಿ ಎರಡನೇ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಕಾಲೇಜಿಗೆ ಉತ್ಕೃಷ್ಟತಾ ಕೇಂದ್ರವಾಗಿ ಮಾನ್ಯತೆ […]

ಎಂಜಿನಿಯರ್‌ಗಳು ಸಮಾಜದ ಸಮಸ್ಯೆಗಳ ಪರಿಹಾರದ ಹರಿಕಾರರಾಗಬೇಕು

Monday, June 11th, 2018
dharmasthala

ಉಜಿರೆ: ಯುವ ಜನತೆ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಸುಂದರ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ತಮ್ಮಲ್ಲಿರುವ ಅದಮ್ಯ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಸದುಪಯೋಗ ಮಾಡಿ ದೇಶದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಬೇಕು. ಹೊಸ ಎಂಜಿನಿಯರಿಂಗ್ ಪದವೀಧರರು ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಹರಿಕಾರರಾಗಬೇಕು ಎಂದು ಬೆಂಗಳೂರಿನ ಎವೆರಿ ಇಂಡಿಯಾ ಸಂಸ್ಥೆಯ ಬ್ಯಾಂಕಿಂಗ್ ಮತ್ತು ಆರ್ಥಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಎಂ.ಡಿ. ನರಸಿಂಹಮೂರ್ತಿ ಹೇಳಿದರು. ಅವರು ಭಾನುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಧಿತಿಕಾ […]

ಎಸ್.ಡಿ.ಎಂ. ಕಾಲೇಜಿನ ಮಾರಿಕಾಡು ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Wednesday, January 3rd, 2018
SDM-college

ಉಜಿರೆ: ಚೆನ್ನೈನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಅಂತರ ವಿ.ವಿ. ಯುವಜನೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಮಾರಿಕಾಡು ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಡಾ. ಚಂದ್ರಶೇಖರ ಕಂಬಾರ ರಚಿಸಿದ ಮಾರಿಕಾಡು ನಾಟಕ ಮೂಲತಃ ವಿಲಿಯಂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದ ಕನ್ನಡ ರೂಪಾಂತರವಾಗಿದೆ. ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಶಂಕರ್ ಮಾರ್ಗದರ್ಶನದಲ್ಲಿ ೧೩ ವಿದ್ಯಾರ್ಥಿಗಳ ತಂಡ ನಾಟಕ ಪ್ರದರ್ಶನ ನೀಡಿದೆ. ವಿದ್ಯಾರ್ಥಿಗಳಾದ ಅನ್ವಿತ್ ಗೌಡ, ಅಂಕಿತ್ ಆಚಾರ್ಯ, ಶಶಿಪ್ರಭಾ, ಸಂಪದ ಎಸ್. […]

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ- ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಪ್ರದಾನ ಕಾರ್ಯಕ್ರಮ

Saturday, December 16th, 2017
SDM-college

ಬೆಳ್ತಂಗಡಿ: ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಇಂದು ದೇಶ ವಿದೇಶಗಳಲ್ಲಿ ಮಾನ್ಯತೆ ಇದೆ. ಉತ್ತಮ ಸೇವೆ-ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ನೂತನ ಪದವೀಧರರು ತಜ್ಞರಾಗಿ ಬದ್ಧತೆಯಿಂದ ಆರೋಗ್ಯ ಭಾಗ್ಯ ಕಾಪಾಡಲು ಕಟಿಬದ್ಧರಾಗಿ ಸೇವೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಹೇಳಿದರು. ಅವರು ಶುಕ್ರವಾರ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದ 106 ಮಂದಿಗೆ ಪದವಿ ಪ್ರದಾನ […]