ಮಂಗಳೂರು : ನಾಗಾರಾಧನೆ ಭಾರತೀಯ ಸಂಪ್ರದಾಯದಲ್ಲಿ ಹೆಚ್ಹಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ತುಳುನಾಡಿನ ಮಟ್ಟಿಗಂತೂ ಅತ್ಯಂತ ಪವಿತ್ರವಾದ ಸಂಪ್ರದಾಯವಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ನಾಗರಪಂಚಮಿಯನ್ನು ವಿವಿಧ ಕಡೆಗಳಲ್ಲಿ ಸಡಗರದಿಂದ ಆಚರಿಸಲಾಯಿತು.
ಮಂಗಳೂರಿನ ಪ್ರಮುಖ ಹಾಗೂ ಪ್ರಸಿದ್ದ ನಾಗಾರಾಧನ ಕ್ಷೇತ್ರಗಳಾದ ಆದಿ ಸುಬ್ರಹ್ಮಣ್ಯ, ಕುಡುಪು ಶ್ರೀ ಆನಂತ ಪದ್ಮನಾಭ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರು ಬ್ರುಹತ್ ಸಂಖೆಯಲ್ಲಿ ನೆರೆದಿದ್ದು ವಿಶೇಷ ಅಲಂಕಾರಗಳೊಂದಿಗೆ ವಿಶೇಷ ಪೂಜೆಗಳು ನೆರವೇರಿದವು.
ನಾಗಸನ್ನಿಧಿಗಳಲ್ಲಿ ಪ್ರಮುಖವಾಗಿ ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಆಭಿಷೇಕಗಳು ಜರಗಿದವು. ಮಂಗಳೂರಿನ ಸಮೀಪದ ನಾಗಾರಾಧನ ಕ್ಷೇತ್ರವಾದ ಕುಡುಪುವಿನಲ್ಲಿ ದೇವರ ದರ್ಶನ ಹಾಗೂ ಪೂಜೆ ಸಲ್ಲಿಸಲು ಭಕ್ತರು ನಸುಕಿನಿಂದಲೆ ಸಾಲಿನಲ್ಲಿ ನಿಂತಿದ್ದರು.
ಇನ್ನುಳಿದಂತೆ ಮಂಗಳೂರಿನ ಉರ್ವಾ ಶ್ರೀ ಮಾರಿಯಮ್ಮ, ಮಂಗಳಾದೇವಿ, ಶ್ರೀ ಕಾಳಿಕಾಂಬಾ ವಿನಾಯಕ ಮಂದಿರ, ಶರವು ಶ್ರೀ ಮಹಾಗಣಪತಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಾಲಯ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮೊದಲಾದ ಪ್ರಮುಖ ದೇವಾಲಯಗಳಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು. ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಲ್ಲು ಭಕ್ತರು ತಮ್ಮ ಸಮೀಪದ ನಾಗಬನಗಳಿಗೆ ಕುಟುಂಬ ಸಮೇತರಾಗಿ ತೆರಳಿ ಪೂಜೆಯನ್ನು ಸಲ್ಲಿಸಿದರು.
Click this button or press Ctrl+G to toggle between Kannada and English