ತುಳುನಾಡಿನಲ್ಲಿ ಸಂಭ್ರಮದ ನಾಗಾರಾಧನೆ

Wednesday, July 25th, 2012
Nagarapanchami

ಮಂಗಳೂರು : ನಾಗಾರಾಧನೆ ಭಾರತೀಯ ಸಂಪ್ರದಾಯದಲ್ಲಿ ಹೆಚ್ಹಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ತುಳುನಾಡಿನ ಮಟ್ಟಿಗಂತೂ ಅತ್ಯಂತ ಪವಿತ್ರವಾದ ಸಂಪ್ರದಾಯವಾಗಿದೆ.  ದ.ಕ  ಹಾಗೂ  ಉಡುಪಿ ಜಿಲ್ಲೆಗಳಲ್ಲಿ  ಸೋಮವಾರ ನಾಗರಪಂಚಮಿಯನ್ನು ವಿವಿಧ ಕಡೆಗಳಲ್ಲಿ  ಸಡಗರದಿಂದ ಆಚರಿಸಲಾಯಿತು. ಮಂಗಳೂರಿನ ಪ್ರಮುಖ ಹಾಗೂ ಪ್ರಸಿದ್ದ  ನಾಗಾರಾಧನ ಕ್ಷೇತ್ರಗಳಾದ ಆದಿ ಸುಬ್ರಹ್ಮಣ್ಯ,  ಕುಡುಪು ಶ್ರೀ ಆನಂತ ಪದ್ಮನಾಭ ದೇವಾಲಯ, ಕುಕ್ಕೆ  ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರು ಬ್ರುಹತ್  ಸಂಖೆಯಲ್ಲಿ ನೆರೆದಿದ್ದು ವಿಶೇಷ  ಅಲಂಕಾರಗಳೊಂದಿಗೆ  ವಿಶೇಷ  ಪೂಜೆಗಳು ನೆರವೇರಿದವು. ನಾಗಸನ್ನಿಧಿಗಳಲ್ಲಿ ಪ್ರಮುಖವಾಗಿ ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಆಭಿಷೇಕಗಳು ಜರಗಿದವು. ಮಂಗಳೂರಿನ […]