ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕ್ಷೇತ್ರ ಕದ್ರಿಯಲ್ಲಿ 9 ವೇದಿಕೆಗಳಲ್ಲಿ ಸುಮಾರು 30 ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಶ್ರಿಕೃಷ್ಣ ವೇಷ ಸ್ಪರ್ಧೆ ಗೆ ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ, ಕದ್ರಿ ದೇವಸ್ಥಾನದ ಆಡಳಿತ ಟ್ರಸ್ಟಿಎ.ಜೆ . ಶೆಟ್ಟಿ ಚಾಲನೆ ನೀಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ,ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಮತ್ತು ಧರ್ಮ ದರ್ಶಿ ಹರಿಕೃಷ್ಣ ಪುನರೂರು, ಶಾರದ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್, ಸಂಘಟಕರಾದ ಕದ್ರಿ ನವನೀತ ಶೆಟ್ಟಿ,ವಿಜಯ ಲಕ್ಷ್ಮೀ ಶೆಟ್ಟಿ, ದಿನೇಶ್ ದೇವಾಡಿಗ, ಸುರೇಶ್ ಕುಮಾರ್, ಸುಧಾಕರ ರಾವ್ ಪೇಜಾವರ ಮೊದಲಾದವರು ಭಾಗವಹಿಸಿದ್ದರು.
ಶ್ರೀಕ್ಷೇತ್ರ ಕದ್ರಿಯಲ್ಲಿ ಕಳೆದ 35ವರ್ಷಗಳಿಂದ ಮಕ್ಕಳ ಪ್ರತಿಭೆ ಯ ಪ್ರದರ್ಶನ,ಸಾಂಸ್ಕೃತಿಕ ವೌಲ್ಯ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ದೃಷ್ಟಿಯಿಂದ ನಡೆಸಿಕೊಂಡು ಬಂದಿರುವ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಗೆ ದೇಶದ ವಿವಿಧ ಕಡೆಗಳಿಂದ ಆಸಕ್ತರು ಈ ಬಾರಿಯೂ ಭಾಗವಹಿಸುತ್ತಿದ್ದಾರೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಶ್ರೀಕೃಷ್ಣ ವರ್ಣ ವೈಭವದ ಚಿತ್ರಕಲಾ ಸ್ಪರ್ಧೆ, ಶ್ರೀಕೃಷ್ನ ಗಾನ ವೈಭವ ಜಾನಪದ ಭಕ್ತಿಗೀತೆ,ಭಾವಗೀತೆ, ಸಂಗೀತ ಸ್ಪರ್ಧೆ, ರಂಗೋಲಿಯಲ್ಲಿ ಶ್ರೀಕೃಷ್ಣ ಸ್ಪರ್ಧೆಗಳು ಶಾರದಾ ವಿದ್ಯಾಲಯ ಕೊಡಿಯಾಲ ಬೈಲಿನಲ್ಲಿ ನಡೆಯಲಿದೆ. ಉಳಿದಂತೆ ಕೃಷ್ಣ ವೇಷ ಸ್ಪರ್ಧೆ ಶ್ರೀಕದ್ರಿ ದೇವಳದ ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿ ಕೆರೆ ಅಶ್ವಥ ಕಟ್ಟೆ ಬಳಿ, ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ, ಅಭಿಷೇಕ, ಕಲ್ಯಾಣ ಮಂಟಪ, ಮಂಜುಶ್ರೀ, ಪ್ರಧಾನ ವೇದಿಕೆ ಸಹಿತ ವಿವಿಧ ಸ್ಪರ್ಧಿಗಳು ಸುರಿಯುತ್ತಿದ್ದ ತುಂತುರು ಮಳೆಯ ನಡುವೆಯೂ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದೂ ಈ ಬಾರಿಯೂ ಸುಮಾರು 3ಸಾವಿರಕ್ಕೂ ಅಧಿ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಾಯಿಸಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ ಸುಧಾಕರ ರಾವ್ ಪೇಜಾವರ ತಿಳಿಸಿದ್ದಾರೆ.
Click this button or press Ctrl+G to toggle between Kannada and English