’ಪಾಂಡೇಶ್ವರ’ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಕ್ಕೆ ಆಗಸ್ಟ್ 28 ರಿಂದ ಅಷ್ಟಮಂಗಳ ಪ್ರಶ್ನೆ

6:26 PM, Tuesday, August 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

pandeshwara ಮಂಗಳೂರು : ಪಾಂಡವರಿಂದ ಸ್ಥಾಪಿಸಲ್ಪಟ್ಟ `ಪಾಂಡೇಶ್ವರ’ ಶ್ರೀ ಮಹಾಲಿಂಗೇಶ್ವರ ದೇವರಿಗೆ 2020 ರ ಮಾರ್ಚ್ ಆಸುಪಾಸಿನಲ್ಲಿ ನಡೆಯಲಿರುವ ಬ್ರಹ್ಮಕಲಶ ಮಹೋತ್ಸವದ ಪೂರ್ವ ತಯಾರಿಯಾಗಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನೆ ಆಗಸ್ಟ್ 28,29,30 ರಂದು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ತಲ್ಲಾವಿಕ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ’ಪಾಂಡೇಶ್ವರ’ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾತನಾಡಿದ ಅವರು ಬ್ರಹ್ಮಕಲಶೋತ್ಸವವು ನಡೆದು 14 ವರ್ಷ ಸಂದಿರುವುದರಿಂದ, ಭಕ್ತಾದಿಗಳ ಸಭೆ ಕರೆದು ಶ್ರೀ ಕ್ಷೇತ್ರದ ಪುನರ್ ನವೀಕರಣ ಹಾಗೂ ಬ್ರಹ್ಮಕಲಶವನ್ನು ನಡೆಸಲು ಈಗಿನ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಎಲ್ಲದರ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರದಲ್ಲಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆ ಇಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಬಂದ ಪ್ರಶ್ನಾವಳಿಯ ದೋಷಗಳನ್ನು ನಿವಾರಿಸಿ ಮುಂದಿನ ವರ್ಷ ಬ್ರಹ್ಮಕಲಶೋತ್ಸವ ಮಾಡುವ ಯೋಜನೆಯನ್ನು ಕಾರ್ಯನಿರ್ವಾಹಕ ಅಧಿಕಾರಿಯವರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ತಲ್ಲಾವಿಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶ್ರೀ ಮಹೇಶ್ ರಾವ್, ಶ್ರೀ ಸಂಜೀವ ಕೋಟ್ಯಾನ್, ಶ್ರೀ ವಿನೋದ್ ಕುಮಾರ್, ಶ್ರೀ ವಾಸುದೇವ ಶೆಣೈ, ಶ್ರೀಮತಿ ಸುಜಾತ ಅಹಲ್ಯ, ಶ್ರೀಮತಿ ಕೆ.ಸಿ. ನೀನಾ ತೀರ್ಮಾನಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕ ಬಿ.ಯಲ್. ಗಣೇಶ್ ಭಟ್ ಹಾಗೂ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ ಮಾತನಾಡಿದರು.

pandeshwara
ಪೌರಾಣಿಕ ವಿಶೇಷ ಮಹಾತ್ಮೆಯಿಂದ ಈ ಕ್ಷೇತ್ರವು ಪಾಂಡವರಿಂದ ಸ್ಥಾಪಿಸಲ್ಪಟ್ಟು ’ಪಾಂಡೇಶ್ವರ’ ವೆಂಬ ಪ್ರತೀತಿಗೆ ಬಂದಿರುತ್ತದೆ. ಕಿರಾತಾರ್ಜುನೀಯದ ಈಶ್ವರನ ಸಾನಿಧ್ಯವೇ ಇಲ್ಲಿಯ ಮೂಲ ಸಾನಿಧ್ಯದ ಕಲ್ಪನೆಯಾಗಿರುತ್ತದೆ.

ತಪೋಬಲವಿರುವ ಋಷಿವರ್ಯಗಳಿಂದ ವ್ಯವಸ್ಥೆಗೊಳಿಸಲ್ಪಟ್ಟು, ಈ ಪ್ರದೇಶದಲ್ಲಿ, ಶ್ರೀ ದೇವರ ಪ್ರೇರಣೆಯಂತೆ ಸಮುದ್ರ ಕೊರೆತವನ್ನು ತಡೆಗಟ್ಟುವ ಉದ್ದೇಶದಿಂದ ಹಿರಿಯರ ಪ್ರಕಾರ ಶ್ರೀ ಮಹಾಲಿಂಗೇಶ್ವರನನ್ನು ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾಗಿರುತ್ತದೆ. ಈ ಕ್ಷೇತ್ರದಲ್ಲಿ ಪ್ರಾಚೀನ ದುರ್ಗಾಶಕ್ತಿಯು ಪ್ರಧಾನವಾಗಿರುತ್ತದೆ. ಇದರ ಬಗ್ಗೆ ಇತಿಹಾಸ ಪುರಾವೆಗಳಿಲ್ಲ.

pandeshwara ಈ ಕ್ಷೇತ್ರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಹೊರತುಪಡಿಸಿ ಶ್ರೀ ಗಣಪತಿ, ನಾಗದೇವರು, ವಿಷ್ಣುಮೂರ್ತಿ, ವೈಷ್ಣವಿದೇವಿ ಹಾಗೂ ಪಂಜುರ್ಲಿ, ವೈದ್ಯನಾಥ ಮುಂಡಿತ್ತಾಯ ಗುಳಿಗ ದೈವಗಳು ನೆಲೆಯಾಗಿರುತ್ತದೆ.

ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ದೇವಳದ ಒಳ ಮೇಲ್ಛಾವಣಿಯನ್ನು ತೆಗೆದು ಹೊಸದನ್ನು ಜೋಡಿಸುವುದು. ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ವೈಷ್ಣವಿ ದೇವಿ, ಪಂಜುರ್ಲಿ, ವೈದ್ಯನಾಥ ಮುಂಡಿತ್ತಾಯ ದೈವಗಳ ದ್ವಾರಗಳಿಗೆ ಬೆಳ್ಳಿಯ ಹೊದಿಕೆ. ಸುತ್ತು, ಪೌಳಿಗಳ (ಮಾಡು) ದುರಸ್ಥಿ. ಭೋಜನ ಛತ್ರದ ದುರಸ್ಥಿ, Boiler (ಹಬೆ ನಿಯಂತ್ರಣ) ವ್ಯವಸ್ಥೆಯ ಪಾಕಶಾಲೆಯ ನಿರ್ಮಾಣ, ಸುತ್ತು ಪೌಳಿಗಳ ಗೋಡೆಗಳ ದುರಸ್ಥಿ. ನಾಗದೇವರ ಕಟ್ಟೆಯ ದುರಸ್ಥಿ, ದೇವರ ರಥದ ಕೊಟ್ಟಿಗೆಯ ನಿರ್ಮಾಣ, ಹೊರಾಂಗಣದ ಹಾಸು ಕಲ್ಲಿನ ಹೊದಿಕೆ, ವಸಂತ ಮಂಟಪ ಪುನರ್ ನಿರ್ಮಾಣ, ದೇವಸ್ಥಾನದ ಮುಂಭಾಗದ ರಾಜಗೋಪುರ ನಿರ್ಮಾಣ, ಶ್ರೀ ಮಹಾಲಿಂಗೇಶ್ವರ ಸಭಾಭವನ ದುರಸ್ಥಿ, ಶ್ರೀ ಮಹಾಗಣಪತಿ ದೈವಗಳ ಪ್ರತ್ಯೇಕ ಗುಡಿ ನಿರ್ಮಾಣ ಮೊದಲಾದ ಜೀರ್ಣೋದ್ಧಾರ ಕೆಲಸಗಳನ್ನು ಕೈಗೊಳ್ಳಲು ಅಡಳಿತ ಸಮಿತಿಯು ಯೋಜನೆಗಳನ್ನು ಹಾಕಿಕೊಂಡಿದೆ.

ಪತ್ರಿಕಾಗೋಷ್ಟಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುರೇಶ್ ತಲ್ಲಾವಿಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಮಹೇಶ್ ರಾವ್, ಸಂಜೀವ ಕೋಟ್ಯಾನ್, ವಿನೋದ್ ಕುಮಾರ್, ಶ್ರೀಮತಿ ಸುಜಾತ ಅಹಲ್ಯ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English