ಕೊಪ್ಪಳ : ಕನಕಗಿರಿ ತಾಲೂಕಿನ ನವಲಿ ಎಂಬ ಗ್ರಾಮದಲ್ಲಿ ಮರಳಿನ ದಿಬ್ಬವೊಂದು ಮೂವರು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಮೃತಪಟ್ಟಿರುವ ಮಕ್ಕಳನ್ನು ಐದು ವರ್ಷದ ಸೋನಂ, ಮೂರು ವರ್ಷದ ಸವಿತಾ ಹಾಗೂ ಎರಡು ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಆಟವಾಡಿಕೊಂಡಿದ್ದ ರೋಷನ್, ಕಿರಣ್ ಮತ್ತು ಬಾಬು ಎಂಬ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟವರನ್ನು ಮಹಾರಾಷ್ಟ್ರ ಕಡೆಯಿಂದ ಇಟ್ಟಿಗೆ ಫ್ಯಾಕ್ಟರಿ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಕುಟುಂಬಕ್ಕೆ ಸೇರಿದ ಮಕ್ಕಳು ಎಂದು ಗುರುತಿಸಲಾಗಿದೆ. ಆಟವಾಡುತ್ತಾ ಮರಳಿನ ಗುಡ್ಡದೊಳಗೆ ಮಕ್ಕಳು ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ಮರಳಿನ ಗುಡ್ಡ ಕುಸಿದು ಬಿದ್ದಿದೆ. ಆಗ ಮಕ್ಕಳಿಗೆ ಹೊರಗೆ ಓಡಿ ಬರಲು ಸಾಧ್ಯವಾಗದೇ ಮರಳಿನ ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗುತ್ತಿದೆ.
ಸ್ಥಳಕ್ಕೆ ಕನಕಗಿರಿ ಪೊಲೀಸರು ಭೇಟಿ ನೀಡಿದ್ದಾರೆ.
Click this button or press Ctrl+G to toggle between Kannada and English