ಕರಾವಳಿಯಲ್ಲಿ ಮೊಂತಿ ಹಬ್ಬ ಸಂಭ್ರಾಮಾಚರಣೆ

11:18 AM, Monday, September 9th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

monti-habbaಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ರವಿವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಿದರು.

ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ನಲ್ಲಿ ಮಂಗಳೂರು ಧರ್ಮಪ್ರಾಂತದ ಪ್ರಧಾನ ಧರ್ಮಗುರು ವಂ| ಮ್ಯಾಕ್ಸಿಂ ನೊರೊನ್ನಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ಕೆಥೆಡ್ರಲ್ನ ಧರ್ಮಗುರು ವಂ| ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ ಅವರು ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನಲ್ಲಿ ಹಬ್ಬದ ಪೂಜೆ ನಡೆಸಿ ಹೊಸ ತೆನೆಗಳಿಗೆ ಆಶೀರ್ವಚನ ನೀಡಿದರು. ಚರ್ಚ್‌ ಪ್ರಧಾನ ಧರ್ಮಗುರು ವಂ| ಹೆನ್ರಿ ಮಸ್ಕರೇನ್ಹಸ್‌ ಉಪಸ್ಥಿತರಿದ್ದರು.

ಮಿಲಾಗ್ರಿಸ್‌ ಕೆಥೆಡ್ರಲ್ನಲ್ಲಿ ರೆಕ್ಟರ್‌ ವಂ| ಡಾ| ಲಾರೆನ್ಸ್‌ ಡಿ’ಸೋಜಾ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.

ಈ ವರ್ಷ ಉತ್ತಮ ಫಸಲು ಒದಗಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಬಲಿಪೂಜೆಯನ್ನು ಅರ್ಪಿಸಲಾಯಿತು.

ಮಹಿಳೆಯರು ಮತ್ತು ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಅರ್ಪಿಸಿ ಭಕ್ತಿಯಿಂದ ನಮನ ಸಲ್ಲಿಸಿದರು. ದೇವಾಲಯಗಳಲ್ಲಿ ಶ್ರದ್ಧೆ ಮತ್ತು ಭಕ್ತಿಪೂರ್ವಕ ಧಾರ್ಮಿಕ ಕಾರ್ಯಗಳು ನಡೆದ ಬಳಿಕ ಭತ್ತದ ತೆನೆಯನ್ನು ಮನೆಗೆ ತಂದು ಹೊಸ ಅಕ್ಕಿಯ ಅನ್ನ ತಯಾರಿಸಿ ಕುಟುಂಬಿಕರು ಸಹಭೋಜನ ಮಾಡಿದರು.

ಯೇಸುಕ್ರಿಸ್ತರ ತಾಯಿ ಮೇರಿಮಾತೆಯ ಜನ್ಮದಿನವನ್ನು ಸೆ. 8ರಂದು ಆಚರಿಸಲಾಗುತ್ತಿದೆ. ಮೇರಿ ಮಾತೆ ದೇವಮಾತೆ ಆಗಿದ್ದು ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ. ಕೈಸ್ತರು ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಬೆಳೆಯ ಹಬ್ಬವನ್ನು ಆಚರಿಸಿದರು. ಹೊಸ ಭತ್ತದ ತೆನೆಯನ್ನು ಕ್ರೈಸ್ತ ದೇವಾಲಯಕ್ಕೆ ಮೆರವಣಿಗೆಯಲ್ಲಿ ತಂದು ಅಲ್ಲಿ ಅದರ ಅಶೀರ್ವಚನವನ್ನು ನೆರವೇರಿಸಲಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English