ವಿದ್ಯುತ್ ಪ್ರವಹಿಸಿ ಎಸೆಸೆಲ್ಸಿ ವಿದ್ಯಾರ್ಥಿ ಮೃತ್ಯು

Saturday, July 18th, 2020
Goutham

ಉಡುಪಿ : ಎಸೆಸೆಲ್ಸಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಜು.17ರಂದು ರಾತ್ರಿ ವೇಳೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರ ಆರನೆ ಕ್ರಾಸ್‌ ನಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮೀನಗರದ ಮಂಜುನಾಥ್ ನಾಯಕ್ ಎಂಬವರ ಮಗ ಗೌತಮ್(15) ಎಂದು ಗುರುತಿಸಲಾಗಿದೆ. ನೆರೆಮನೆಯವರು ತಮ್ಮ ಬಾವಿಯಿಂದ ಪಂಪ್‌ಸೆಟ್ ಮೇಲಕ್ಕೆತ್ತುವಾಗ ಅಲ್ಲೇ ಸಮೀಪದಲ್ಲಿ ಇದ್ದ ಗೌತಮ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಪ್ರತಿಭಾವಂತ ಎಸೆಸೆಲ್ಸಿ ವಿದ್ಯಾರ್ಥಿಯಾಗಿರುವ ಗೌತಮ್, ಇತ್ತೀಚೆಗೆ ನಡೆದ ಎಸೆಸೆಲ್ಸಿ […]

ಕರಾವಳಿಯಲ್ಲಿ ಮೊಂತಿ ಹಬ್ಬ ಸಂಭ್ರಾಮಾಚರಣೆ

Monday, September 9th, 2019
monti-habba

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ರವಿವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಿದರು. ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ನಲ್ಲಿ ಮಂಗಳೂರು ಧರ್ಮಪ್ರಾಂತದ ಪ್ರಧಾನ ಧರ್ಮಗುರು ವಂ| ಮ್ಯಾಕ್ಸಿಂ ನೊರೊನ್ನಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ಕೆಥೆಡ್ರಲ್ನ ಧರ್ಮಗುರು ವಂ| ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ ಅವರು ಪಾಂಬೂರು ಹೋಲಿ ಕ್ರಾಸ್‌ ಚರ್ಚ್‌ನಲ್ಲಿ ಹಬ್ಬದ ಪೂಜೆ ನಡೆಸಿ ಹೊಸ ತೆನೆಗಳಿಗೆ ಆಶೀರ್ವಚನ ನೀಡಿದರು. […]

ಸಂತ ಆಂತೊನಿ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ತ್ರಿದಿನ ಪ್ರಾರ್ಥನೆಗೆ ಚಾಲನೆ

Monday, June 11th, 2018
st-anthony

ಮಂಗಳೂರು :  ವಂದನೀಯ ಸ್ವಾಮಿ ಸಿಪ್ರಿಯನ್ ಡಿ’ಸೋಜ(ಕಾಪುಚಿನ್)ರವರು ಮಿಲಾಗ್ರಿಸ್ ಸಂತ ಆಂತೊನಿಯವರ ಪುಣ್ಯ ಕ್ಷೇತ್ರದಲ್ಲಿ ಸಂತ ಆಂತೊನಿಯವರ ಧ್ವಜರೋಹಣ ಮಾಡುವ ಮೂಲಕ ತ್ರಿದಿನ ಪ್ರಾರ್ಥನೆಗೆ ಚಾಲನೆ ಕೊಟ್ಟರು. ನಂತರ ಮೊದಲ ದಿನದ ಬಲಿಪೂಜೆ ಅರ್ಪಿಸಿದರು. ವಂದನೀಯ ಡೊಲ್ಫಿ ಸೆರಾವೊ(ಕಾಪುಚಿನ್)ರವರು ಬಲಿಪೂಜೆಯ ಸಮಯದಲ್ಲಿ ಪ್ರವಚನ ನೀಡಿದರು. ತಮ್ಮ ಪ್ರವಚನದಲ್ಲಿ ’ಸಂತ ಆಂತೊನಿ-ಸಂಕಷ್ಟದಲ್ಲಿದ್ದವರಿಗೆ ಭರವಸೆ’ ಎಂಬ ವಿಷಯದಲ್ಲಿ ಪ್ರವಚನ ನೀಡಿದರು. ಮಾನವ ಕುಲಕ್ಕೆ ವಿಮೋಚನೆ ಸಾರಲು ಬಂದ ಯೇಸು ಸ್ವಾಮಿ ದೇವರ ಸಾಮ್ರಾಜ್ಯ ಬೋದಿಸಿದರು, ಜನರನ್ನು ಗುಣಪಡಿಸಿದರು ಮತ್ತು ಅವರಲ್ಲಿದ್ದ […]

ಪ್ರಾಂಶುಪಾಲರ ಮೇಲೆ ಹಲ್ಲೆ: ವಿದ್ಯಾರ್ಥಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೋಷಕರು ಹಾಗೂ ಸಿಬಂದಿ ವರ್ಗದಿಂದ ಪ್ರತಿಭಟನೆ

Monday, October 24th, 2016
Milagress-collage

ಮಂಗಳೂರು: ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೋಷಕರು ಹಾಗೂ ಸಿಬಂದಿ ವರ್ಗ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೀಪಕ್, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸುವ ಮೂಲಕ ವಿದ್ಯಾರ್ಥಿ ಕಾಲೇಜಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದಾನೆ. ಮೂರು ದಿನಗಳಿಂದ ಈತ ತಲೆಮರೆಸಿಕೊಂಡಿದ್ದಾನೆ. ಪೊಲೀಸರಿಗೆ ಈವರೆಗೂ ಈತನನ್ನು ಹಿಡಿಯಲು ಆಗಿಲ್ಲ. ಆರೋಪಿಯ ರಕ್ಷಣೆಗೆ ಯಾರೋ ನಿಂತಿದ್ದಾರೆ. ಇದನ್ನು ತಕ್ಷಣ ಪತ್ತೆ ಹಚ್ಚಬೇಕು. ಕಾಲೇಜಿನಲ್ಲಿ ನಡೆದ ಈ ಘಟನೆಯಿಂದ […]