ಸಂತ ಆಂತೊನಿ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ತ್ರಿದಿನ ಪ್ರಾರ್ಥನೆಗೆ ಚಾಲನೆ

12:49 PM, Monday, June 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

st-anthonyಮಂಗಳೂರು :  ವಂದನೀಯ ಸ್ವಾಮಿ ಸಿಪ್ರಿಯನ್ ಡಿ’ಸೋಜ(ಕಾಪುಚಿನ್)ರವರು ಮಿಲಾಗ್ರಿಸ್ ಸಂತ ಆಂತೊನಿಯವರ ಪುಣ್ಯ ಕ್ಷೇತ್ರದಲ್ಲಿ ಸಂತ ಆಂತೊನಿಯವರ ಧ್ವಜರೋಹಣ ಮಾಡುವ ಮೂಲಕ ತ್ರಿದಿನ ಪ್ರಾರ್ಥನೆಗೆ ಚಾಲನೆ ಕೊಟ್ಟರು. ನಂತರ ಮೊದಲ ದಿನದ ಬಲಿಪೂಜೆ ಅರ್ಪಿಸಿದರು. ವಂದನೀಯ ಡೊಲ್ಫಿ ಸೆರಾವೊ(ಕಾಪುಚಿನ್)ರವರು ಬಲಿಪೂಜೆಯ ಸಮಯದಲ್ಲಿ ಪ್ರವಚನ ನೀಡಿದರು. ತಮ್ಮ ಪ್ರವಚನದಲ್ಲಿ ’ಸಂತ ಆಂತೊನಿ-ಸಂಕಷ್ಟದಲ್ಲಿದ್ದವರಿಗೆ ಭರವಸೆ’ ಎಂಬ ವಿಷಯದಲ್ಲಿ ಪ್ರವಚನ ನೀಡಿದರು.

ಮಾನವ ಕುಲಕ್ಕೆ ವಿಮೋಚನೆ ಸಾರಲು ಬಂದ ಯೇಸು ಸ್ವಾಮಿ ದೇವರ ಸಾಮ್ರಾಜ್ಯ ಬೋದಿಸಿದರು, ಜನರನ್ನು ಗುಣಪಡಿಸಿದರು ಮತ್ತು ಅವರಲ್ಲಿದ್ದ ದುರಾತ್ಮಗಳಿಂದ ಅವರಿಗೆ ಮುಕ್ತಿ ನೀಡಿದರು. ಅವರ ಜನಪ್ರಿಯತೆ ಸಹಿಸದ ಯೆಹೂದಿ ಮುಖಂಡರು ಅವರ ಬಗ್ಗೆ ಅಪಪ್ರಚಾರ ಮಾದಿದರು. ಅದೆಲ್ಲಕ್ಕೆ ಕಿವಿಗೊಡದ ಯೇಸುಸ್ವಾಮಿ ಎಲ್ಲರಿಗೆ ಒಳಿತು ಮಾಡುತ್ತಾ ಹೋದರು.

ಸಂತ ಆಂತೊನಿಯವರು ದೇವರು ತಮಗೆ ನೀಡಿದ ಪ್ರತಿಭೆಗಳನ್ನು ಮತ್ತು ಪ್ರವಚನ ಮಾಡುವ ಕೊಡುಗೆಯನ್ನ್ನು ಜನರಿಗೆ ಒಳಿತು ಮಾಡುವುದರಲ್ಲಿ ಉಪಯೋಗಿಸಿದರು. ಅವರ ಮರಣ ನಂತರವೂ ಕಳೆದ ಎಂಟು ಶತಮಾನಗಳಲ್ಲಿ ಪ್ರಪಂಚದೆಲ್ಲೆಡೆ ಜನರು ಅವರಲ್ಲಿ ತಮ್ಮ ಕೋರಿಕೆಗಳನ್ನು ತರುತ್ತಾರೆ. ಸಂತ ಆಂತೊನಿಯವರು ತಮ್ಮಲ್ಲಿ ಬಂದ ಯಾವ ಭಕ್ತಾಧಿಗಳನ್ನು ಬರಿಗೈಯಲ್ಲಿ ಕಳುಹಿಸದೆ ಅವರ ಅವಶ್ಯಕತೆಗಳಲ್ಲಿ ದೇವರಲ್ಲಿ ಪ್ರಾರ್ಥಿಸಿ ಅವರಿಗೆ ಬೇಕಾದ ವರಕೃಪೆಗಳನ್ನು ದಯಪಾಲಿಸುತ್ತಾರೆ.

ಫಾ. ಫ್ರಾನ್ಸಿಸ್ ಡಿ’ಸೋಜ ನವೇನ ಭಕ್ತಿ ನೆರವೇರಿಸಿ ಕೊಟ್ಟರು. ಫಾ. ವಲೇರಿಯನ್ ಡಿ’ ಸೋಜ, ಫಾ. ತ್ರಶಾನ್ ಡಿ’ಸೋಜ ಹಾಜರಿದ್ದರು. ಜನರು ಈ ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಥೆಯ ನಿರ್ದೇಶಕ ಫಾ. ಒನಿಲ್ ಡಿ’ಸೋಜ ಎಲ್ಲರನ್ನು ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English