ಮಂಗಳೂರು : ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದ ಘಟನೆ ಪಾಂಡೇಶ್ವರದಲ್ಲಿ ನಡೆದಿದೆ. ಮೃತ ಯುವಕನನ್ನು ಅರುಣ್ ರಾಜ್ (31) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ದಿನಗಳ ಹಿಂದೆಯೆ ನಾಪತ್ತೆಯಾಗಿದ್ದ.
ಈತ ಮೂಲತಃ ಮೂಡುಬಿದ್ರೆಯನಾಗಿದ್ದು ಯುವಕನ ತಂದೆ ಸಾಗರದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮನೆಯವರು ಈತ ತಂದೆ ಇದ್ದಲ್ಲಿ ತೆರಳಿರಬಹುದು ಅಂದುಕೊಂಡು ಸುಮ್ಮನಾಗಿದ್ದರು. ಆದರೆ ಈ ನಡುವೆ ಅರುಣ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ.
ಅರುಣ್ ಯಾರು ವಾಸವಿರದ ತನ್ನ ಪಾಂಡೇಶ್ವರದಲ್ಲಿರುವ ಅಜ್ಜಿಮನೆಗೆ ತೆರಳಿದ್ದು, ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅರುಣ್ ಆತ್ಮಹತ್ಯೆ ಮಾಡಿಕೊಂಡ ಖಾಲಿ ಇದ್ದ ಮನೆಯಿಂದ ಬುಧವಾರ ಕೆಟ್ಟ ವಾಸನೆ ಬರುತ್ತಿರುವುದರಿಂದ ನೆರೆಹೊರೆವರು ಮನೆ ಬಳಿ ಹೋಗಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಅರುಣ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Click this button or press Ctrl+G to toggle between Kannada and English