ಮಂಗಳೂರು ತಾಲೂಕಿನಲ್ಲಿ ನ. 1ರಿಂದ ಪ್ಲಾಸ್ತಿಕ್ ನಿಷೇಧ

4:17 PM, Friday, October 12th, 2012
Share
1 Star2 Stars3 Stars4 Stars5 Stars
(No Ratings Yet)
Loading...

Dr N S Channappa Gowda.ಮಂಗಳೂರು : ಪ್ಲಾಸ್ಟಿಕ್  ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಜಾರಿಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪಗೌಡ ಅವರು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ  ಗುರುವಾರ  ಮಾತನಾಡಿದ  ಅವರು ನವೆಂಬರ್ ೧ರಿಂದ ಪ್ಲಾಸ್ಟಿಕ್‌ ನಿಷೇದ ಮಂಗಳೂರು ನಗರ, ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.  ಜಿಲ್ಲೆಯ ನಾಗರಿಕರ ಸಹಕಾರ ಪ್ಲಾಸ್ಟಿಕ್‌ ಹಾವಳಿಯನ್ನು ನಿಷೇಧಿಸಲು ಅಗತ್ಯವಿದೆ ಎಂದರು.

ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲೆಯ ಆಡಳಿತದ ಸಹಕಾರ ಅಗತ್ಯವಿದೆ.  ಪ್ಲಾಸ್ಟಿಕ್ ಬಳಕೆ ನಿಷೇಧ ಕೇವಲಪ್ಲಾಸ್ಟಿಕ್ ಬಳಕೆದಾರರು, ಉತ್ಪಾದಕರು, ವಾಣಿಜ್ಯ ಮತ್ತು ಕೆನರಾ ಚೇಂಬರ್ಸ್ ನವರು  ಈ ಸಂಬಂಧ ನೀಡುವ ಸಲಹೆಗಳನ್ನು ಪಡೆದ ನಂತರ ಜಾರಿಗೆ ತರಲಾಗುವುದು ಎಂದರು.  ಈಗಾಗಲೇ 40 ಮೈಕ್ರಾನ್‌ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಕೈ ಚೀಲಗಳ ಬಳಕೆಯನ್ನು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಪರಿಶೀಲಿಸಲು ಎಂಸಿಸಿ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ದಂಡ ಕಟ್ಟಿಸಿಕೊಂಡಿದೆಯಲ್ಲದೆ, ಬಿಗಿ ಕಾನೂನು ಕ್ರಮಗಳನ್ನು ಕೈಗೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ಲಾಸ್ಟಿಕ್ ಬಳಕೆಯ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಕ್ರಮಕೈಗೊಳ್ಳುವಂತೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ ಎಂದು ಅವರು ಈ ಸಂದರ್ಭ ದಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಉತ್ಪಾದಿಸುವ 60 ಕೈಗಾರಿಕೆಗಳು ಸ್ಥಳೀಯವಾಗಿದ್ದು, ಪ್ಲಾಸ್ಟಿಕ್ ಗೆ ಪರ್ಯಾಯವಾಗಿಬಟ್ಟೆ ಚೀಲಉತ್ಪಾದಿಸಲು ಸ್ತ್ರೀ ಸಂಘಗಳು, ಸ್ವ ಸಹಾಯ ಸಂಘಗಳು ಬಟ್ಟೆ ಚೀಲ ಉತ್ಪಾದಿಸಲು ಮುಂದೆ ಬಂದರೆ ಅವರಿಗೆ ಸಬ್ಸೀಡಿ ನೀಡಲಾಗುವುದು. ಜನರಿಗೆ ಹೊರೆಯಾಗದ ರೀತಿಯಲ್ಲಿ ಮಾರುಕಟ್ಟೆಗೆ ಚೀಲಗಳನ್ನು ವಿತರಿಸಲು ಚಿಂತನೆ ನಡೆಸುವುದಾಗಿ ನುಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ವಿಜಯಪ್ರಕಾಶ್ ಮತ್ತು ಮಹಾನಗರ ಪಾಲಿಕೆ ಆಯುಕ್ತಡಾ.ಹರೀಶ್ ಕುಮಾರ್, ಮಾಲಿನ್ಯ ನಿಯಂತ್ರಾಣಾಧಿಕಾರಿ ಲಕ್ಶ್ಮಣ್ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English