ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಕಷ್ಟ ಸಾಧ್ಯ ಮನಪಾ ಆಯುಕ್ತ

Friday, December 21st, 2012
Dr Harish Kumar

ಮಂಗಳೂರು :ಪ್ಲಾಸ್ಟಿಕ್ ನ್ನು ನಿಷೇಧಿಸಿ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆಯಾದರೂ ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಮತ್ತು ಇದಕ್ಕೆ ಸೂಕ್ತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಶ್ರಮದಾಯಕವಾದ ಕೆಲಸ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹಿಂದಿನ ಜಿಲ್ಲಾಧಿಕಾರಿಯವರು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಕಾನೂನು ಜಾರಿಗೊಳಿಸಿ ಆದೇಶ ನೀಡಿದ್ದರೂ ಇದನ್ನು ಜಾರಿಗೊಳಿಸಲು ನ್ಯಾಯಾಲಯದ ತೀರ್ಮಾನ ಬರಬೇಕಿದೆ ಎಂದರು. ಪ್ಲಾಸ್ಟಿಕ್ ಕೈ ಚೀಲಗಳಿಗೆ […]

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಮೂರ್ಖತನದ ನಿರ್ಧಾರ

Saturday, November 24th, 2012
Plastic Bag

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಎನ್ನುವ ಬೋರ್ಡ್ ತಗಲಿಸಿ ಬಹಳ ದಿನಗಳೇ ಸರಿದು ಹೋದವು.. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಯಾರಿಸುವ ಅತಿ ಹೆಚ್ಚು ಕಂಪೆನಿಗಳು ಇರುವುದು ಮಂಗಳೂರಿನಲ್ಲಿ. ಇದಕ್ಕಾಗಿ ಉದ್ಯಮಿಗಳು ಕೋಟಿಗಳ ರೂಪದಲ್ಲಿ ಬ್ಯಾಂಕ್ ಸಾಲ ಮಾಡಿ ಬಂಡವಾಳ ಹೂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಂದಾಜು 50ರಷ್ಟು ಪ್ಲಾಸ್ಟಿಕ್ ತಯಾರಿಕೆ ಘಟಕಗಳು ಮತ್ತು ವರ್ತಕರು ಇದ್ದಾರೆ. ಸುಮಾರು ಐದು ಸಾವಿರ ಮಂದಿ ನೇರವಾಗಿ […]

ಮಂಗಳೂರು ತಾಲೂಕಿನಲ್ಲಿ ನ. 1ರಿಂದ ಪ್ಲಾಸ್ತಿಕ್ ನಿಷೇಧ

Friday, October 12th, 2012
Dr N S Channappa Gowda.

ಮಂಗಳೂರು : ಪ್ಲಾಸ್ಟಿಕ್  ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಜಾರಿಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪಗೌಡ ಅವರು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ  ಗುರುವಾರ  ಮಾತನಾಡಿದ  ಅವರು ನವೆಂಬರ್ ೧ರಿಂದ ಪ್ಲಾಸ್ಟಿಕ್‌ ನಿಷೇದ ಮಂಗಳೂರು ನಗರ, ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.  ಜಿಲ್ಲೆಯ ನಾಗರಿಕರ ಸಹಕಾರ ಪ್ಲಾಸ್ಟಿಕ್‌ ಹಾವಳಿಯನ್ನು ನಿಷೇಧಿಸಲು ಅಗತ್ಯವಿದೆ ಎಂದರು. ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲೆಯ ಆಡಳಿತದ ಸಹಕಾರ ಅಗತ್ಯವಿದೆ. […]