ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಕಷ್ಟ ಸಾಧ್ಯ ಮನಪಾ ಆಯುಕ್ತ

3:13 PM, Friday, December 21st, 2012
Share
1 Star2 Stars3 Stars4 Stars5 Stars
(No Ratings Yet)
Loading...

Dr Harish Kumarಮಂಗಳೂರು :ಪ್ಲಾಸ್ಟಿಕ್ ನ್ನು ನಿಷೇಧಿಸಿ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆಯಾದರೂ ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಮತ್ತು ಇದಕ್ಕೆ ಸೂಕ್ತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಶ್ರಮದಾಯಕವಾದ ಕೆಲಸ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹಿಂದಿನ ಜಿಲ್ಲಾಧಿಕಾರಿಯವರು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಕಾನೂನು ಜಾರಿಗೊಳಿಸಿ ಆದೇಶ ನೀಡಿದ್ದರೂ ಇದನ್ನು ಜಾರಿಗೊಳಿಸಲು ನ್ಯಾಯಾಲಯದ ತೀರ್ಮಾನ ಬರಬೇಕಿದೆ ಎಂದರು.

ಪ್ಲಾಸ್ಟಿಕ್ ಕೈ ಚೀಲಗಳಿಗೆ ಪರ್ಯಾಯವಾಗಿ ಹೆಚ್ಚಿನ ಕಡೆಗಳಲ್ಲಿ ಇಂದು ಪಾಲಿಪ್ರೋಪಿಲಿನ್ ಚೀಲಗಳನ್ನು ಬಳಸಲಾಗುತ್ತಿದೆ. ಆದರೆ ಈ ಚೀಲಗಳಿಗೆ ಬಳಸುವ ಕಚ್ಚಾವಸ್ತುಗಳು ಕೂಡ ಪ್ಲಾಸ್ಟಿಕ್ ಅಂಶಗಳನ್ನು ಹೊಂದಿವೆ. ಪ್ಲಾಸ್ಟಿಕನ್ನು ಜನಮಾನಸದಿಂದ ದೂರ ಮಾಡಲು ಮುಂದಿನ ಎರಡು ದಶಕಗಳೇ ಬೇಕಾಗಬಹುದು. ಯಾಕೆಂದರೆ ಅದು ಜನರ ಜೀವನದ ಜತೆ ಬೆರೆತು ಹೋಗಿದೆ ಹಾಗೆಂದು ಪ್ಲಾಸ್ಟಿಕ್ ಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಅದನ್ನು ಮತ್ತಷ್ಟು ಉಪಯೋಗಿಸುತ್ತಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಪರಿಸರದ ಮೇಲೆ ಅದು ಗಾಢವಾದ ಪರಿಣಾಮ ಬೀರಿ ಜೀವನ ವ್ಯವಸ್ಥೆಗೇ ಮಾರಕವಾಗುವ ಅಪಾಯವಿದೆ ಎಂದವರು ಹೇಳಿದರು.

ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ ವಿಧಿಸುವ ವಿಷಯಕ್ಕೆ ಸಂಬಂದಪಟ್ಟಂತೆ ಮಾತನಾಡಿದ ಅವರು ಪ್ಲಾಸ್ಟಿಕ್ ನಿಷೇಧ ಜಿಲ್ಲೆಯಲ್ಲಿ ಕೇವಲ ಮಂಗಳೂರು ತಾಲೂಕಿನಲ್ಲಿ ಜಾರಿಯಾಗಿದೆಯೆ ಹೊರತು ಬೇರೆ ಜಿಲ್ಲೆಗಳಲ್ಲಿ ಅಲ್ಲ, ಇತರ ಜಿಲ್ಲೆಗಳಲ್ಲಿ ಇದರ ಬಳಕೆ ನಡೆಯುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ತಯಾರಕರು ಅದನ್ನು ಮಂಗಳೂರಿಗಿಂತ ಹೊರಗಡೆ ಮಾರಾಟ ಮಾಡಬಹುದಾಗಿರುವುದರಿಂದ ತಯಾರಕರ ಮೆಲೆ ನಿಷೇಧ ಹೇರುವುದು ಸರಿಯಲ್ಲ ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ ವಿಧಿಲು ನಿರ್ಧರಿಸಲಾಗಿದೆ ಎಂದರು.

ತುಂಬೆ ಅಣೆಕಟ್ಟಿನ ಕಾಮಗಾರಿಯ ಬಗ್ಗೆ ಮಾತನಾಡಿದ ಅವರು ತುಂಬೆಯಲ್ಲಿ ನೂತನ ಡ್ಯಾಂ ನಿರ್ಮಾಣ ಕಾಮಗಾರಿಯು ಮುಂದಿನ ನವೆಂಬರ್‌ನಲ್ಲಿ ಮುಗಿಯಲಿದೆ. ಈ ಡ್ಯಾಂ 12 ಮೀಟರ್ ಎತ್ತರದಲ್ಲಿ ನಿರ್ಮಾಣವಾದರೂ, ಈ ಹಿಂದಿನಂತೆ 7 ಮೀಟರ್ ನೀರನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಇದರಿಂದ ಪರಿಸರ ಮುಳುಗಡೆಯಾಗುತ್ತದೆ ಎಂಬ ಆತಂಕ ಬೇಡ ಎಂದು ಅವರು ತಿಳಿಸಿದರು. ಮತ್ತು ಬಿಜೈ ಮಾರ್ಕೆಟ್ ಕಾಮಗಾರಿಗೆ ಸಂಬಂದಪಟ್ಟಂತೆ ಮಾತನಾಡಿದ ಅವರು ಮಾರ್ಕೆಟ್ ಕಾಮಗಾರಿಗೆ ಈವರೆಗೆ ಐದು ಬಾರಿ ಟೆಂಡರ್ ಕರೆಯಲಾಗಿದ್ದರೂ, ಗುತ್ತಿಗೆದಾರರಿಲ್ಲದೆ ಕಾಮಗಾರಿ ಬಾಕಿ ಉಳಿದಿದೆ ಎಂದರು. ಈ ಸಂದರ್ಭ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English