ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬ್ಲೂ ಫಿಲಂ ಹೀರೋ : ಸಾ.ರಾ. ಮಹೇಶ್

5:28 PM, Monday, September 23rd, 2019
Share
1 Star2 Stars3 Stars4 Stars5 Stars
(No Ratings Yet)
Loading...

blue-filmಮೈಸೂರು : ಹೆಚ್. ವಿಶ್ವನಾಥ್ ಒಬ್ಬ ಬ್ಲೂ ಬಾಯ್. ಬ್ಲೂ ಫಿಲಂ ಹೀರೋ ಹೆಚ್. ವಿಶ್ವನಾಥ್. ಅದರ ಹೀರೋಯಿನ್ ಯಾರೆಂದು ಕೂಡ ನಮಗೆ ಗೊತ್ತು. ಅವರ ಬುದ್ದಿ ಎಲ್ಲರಿಗೂ ಗೊತ್ತು. ಇದೆಲ್ಲ ಸುಳ್ಳು ಎಂದಾದರೆ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ ಎಂದು ಸಾ.ರಾ. ಮಹೇಶ್, ಹೆಚ್. ವಿಶ್ವನಾಥ್ ಗೆ ಸವಾಲು ಹಾಕಿದ್ದಾರೆ.

ಇಂದು ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹೆಚ್. ವಿಶ್ವನಾಥ್ ಒಬ್ಬ ಬ್ಲೂ ಬಾಯ್, ಬ್ಲೂ ಫಿಲಂ ಹೀರೋ ಹೆಚ್. ವಿಶ್ವನಾಥ್. ಅದರ ಹೀರೋಯಿನ್ ಯಾರೆಂದು ಕೂಡ ನಮಗೆ ಗೊತ್ತು. ಅವರೆಂತಹ ಕೊಚ್ಚೆಗುಂಡಿ ಅಂತ ಎಲ್ಲರಿಗು ಗೊತ್ತು. ಇದೆಲ್ಲ ಸುಳ್ಳು ಸುಳ್ಳು ಎಂದಾದರೆ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲಿ ಎಂದಿದ್ದಾರೆ. ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ವಿಶ್ವನಾಥ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಕೆಲವರ ಆಸ್ತಿ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ 200 ಪಟ್ಟು ಹೆಚ್ಚಾಗಿದೆ. ನಾನು ಇಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಆಸ್ತಿ ಮಾರಿ ಸಾಲ ಮಾಡಿಕೊಂಡಿದ್ದೇನೆ ಎಂದು ಪರೋಕ್ಷವಾಗಿ ಶಾಸಕ ಸಾ.ರಾ. ಮಹೇಶ್ ವಿರುದ್ಧ ಆರೋಪ ಮಾಡಿದ್ದರು ಇದಕ್ಕೆ ಸಾ.ರಾಮಹೇಶ್‌ಇಂದು ಪ್ರತಿಕ್ರಿಯಿಸಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English