ಬೆಂಗಳೂರು : ಸಾಕಷ್ಟು ಗೊಂದಲಗಳ ನಡುವೆ ಬಿಬಿಎಂಪಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ.
ಚುನಾವಣೆ ಖಚಿತವಾದರೂ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮಾತ್ರ ಹಾಗೆಯೇ ಮುಂದುವರೆದಿದೆ. ಇದಕ್ಕೆ ಸಿಎಂ ಬಿಎಸ್ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟವೇ ಕಾರಣವಾಗಿದೆ.
ಉಪಮೇಯರ್ ಆಗಿ ಗುರುಮೂರ್ತಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸಿಕೊಂಡು ಅಧಿಕಾರ ನಡೆಸುತ್ತಿವೆ. ಹೀಗಾಗಿ ಮೇಯರ್ ಉಪ ಮೇಯರ್ ಸ್ಥಾನ ಬಿಜೆಪಿಗೆ ಮರೀಚಿಕೆಯಾಗಿತ್ತು.
ಬಿಜೆಪಿ ಪಕ್ಷದ ಹಿರಿಯ ಕಾರ್ಪೋರೇಟರ್ ಆಗಿರುವ ಪದ್ಮನಾಭ ರೆಡ್ಡಿ ಕಳೆದ ನಾಲ್ಕು ವರ್ಷದಿಂದ ಬಿಬಿಎಂ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಇವರು ಆರಂಭದಿಂದಲೂ ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪಕ್ಷ ಈ ಬಾರಿ ಇವರನ್ನೇ ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು.
ಆದರೆ, ಕೊನೆಯ ವರ್ಷವಾದರೂ ಮೇಯರ್ ಸ್ಥಾನ ಪಡೆಯಲೇಬೇಕು ಎಂಬ ಹಠದಿಂದ ಬಿಜೆಪಿ ನಾಯಕರು ನಾನಾ ತಂತ್ರಗಳನ್ನು ಹೆಣೆದಿತ್ತು. ಇಬ್ಬರು ಜೆಡಿಎಸ್ ಶಾಸಕರು ಚುನಾವಣೆ ಬಹಿಷ್ಕರಿಸಿದ್ದರು.
ಸತ್ಯನಾರಾಯಣ ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿಯಾಗಿದ್ದರು. ಮೊದಲು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಲಾಯಿತು. ಕೈ ಎತ್ತುವ ಮೂಲಕ ಮತ ಚಲಾಯಿಸಲಾಯಿತು.
Click this button or press Ctrl+G to toggle between Kannada and English