ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ ಯ ಕೇಂದ್ರೀಯ ಮಂಡಳಿ ಅದ್ಯಕ್ಷ ರಾದ ಯೋಗಿಶ್ ಶೆಟ್ಟಿ ಜಪ್ಪು ಇವರ ಅದ್ಯಕ್ಷ ತೆಯಲ್ಲಿ ಶನಿವಾರ ಸಂಜೆ ಮಂಗಳೂರು ನಗರ ಘಟಕದ ಸಭೆ ಜರಗಿತು.
ಸಭೆ ಯಲ್ಲಿ ಸ್ಥಾಪಕ ಅದ್ಯಕ್ಷ ರಾದ ಯೋಗಿಶ್ ಶೆಟ್ಟಿ ಜಪ್ಪುರವರು ಮಾತಾಡಿ ತುಳುನಾಡ ರಕ್ಷಣಾ ವೇದಿಕೆಯ 10 ವರ್ಷ ತುಂಬಿರುವ ಸಂದರ್ಭದಲ್ಲಿ ಮಂಗಳೂರು ನಗರದ ಅಬಿವ್ಯದ್ದಿ ಮತ್ತು ಸಮಸ್ಯೆ ಗಳಿಗೆ ಪರಿಹಾರ ಕಂಡು ಕೊಳ್ಳಲು ಮಂಗಳೂರು ನಗರ ಘಟಕ ಬಲಿಷ್ಠ ಪಡಿಸುವ ಅಗತ್ಯ ವಿದೆ. ಇದನ್ನು ಮನಗಂಡು ಇಂದು ಮಂಗಳೂರು ನಗರ ನೂತನ ಸಮಿತಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಹಾಗೂ ಹೊಸ ಪದಾಧಿಕಾರಿಗಳ ಚುನಾವಣಾ ಆಯ್ಕೆ ಪ್ರಕ್ರಿಯೆ ನಡೆಸಿದರು.
ನೂತನವಾಗಿ ಅದ್ಯಕ್ಷ ರಾಗಿ ಟಿ. ಹಸನ್ ಅಡ್ಡೂರು, ಉಪಾಧ್ಯಕ್ಷ ರಾಗಿ ಅನಿಲ್ ಡಿ’ಸಿಲ್ವ್ , ಅಬ್ದುಲ್ ಅಜೀಜ್ , ಶಾರದ ಶೆಟ್ಟಿ , ಪ್ರದಾನ ಕಾರ್ಯದರ್ಶಿಯಾಗಿ ಗೋಲ್ಡನ್ ಪಾರೂಕ್ ಸಂಘಟನಾ ಕಾರ್ಯದರ್ಶಿಯಾಗಿ ಬಿ. ಎಂ.ಮುಸ್ತಕ್ ತಲಪಾಡಿ ,ಜೊತೆ ಕಾರ್ಯದರ್ಶಿ ಪ್ರಮೋದ್ ನಾಯರ್ , ಹಮೀದ್ ಕಾವೂರ್ , ಕೋಶಾಧಿಕಾರಿಯಾಗಿ ರೋಶನ್ ಡಿಸೋಜಾ, ಗೌರವ ಸಲಹೆಗಾರರಾಗಿ ರೂಪೇಶ್ ನಾಯ್ಕ್ ,ಹರೀಶ್ ಶೆಟ್ಟಿ ,ಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಹಿಳಾದ್ಯಕ್ಷೆ ಜ್ಯೋತಿಕಾ ಜೈನ್, ಕೇಂದ್ರೀಯ ಮಂಡಳಿಯ ಸಂಘಟನೆ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಕ್ಷತ್ ಬಂಗೇರ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English