ಮೂಲಂಗಿ ಮತ್ತು ಪುದೀನಾದಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ

4:51 PM, Monday, October 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Pudeena* ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ.
* ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ.
* ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ.
* ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ.
* ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ. ಹೀಗೆ ವಾರಕ್ಕೊಮ್ಮೆ ಮಾಡಿ.

ಮೂಲಂಗಿ ಅನೇಕ ಖಾಯಿಲೆಗಳನ್ನು ಗುಣ ಮಾಡುತ್ತೆ :
ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.- ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.

– ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

– ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
– ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.

– ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.

ಎಲ್ಲದಕ್ಕೂ ಮಿತಿ ಇರಲಿ ಹೆಚ್ಚಾದರೆ ಅಮೃತವು ವಿಷವಾಗುವುದು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English