ಆಳ್ವಾಸ್ ವಿದ್ಯಾರ್ಥಿಗಳಿಂದ ಕಲಿಯೋಣ ಕಂಪ್ಯೂಟರ್, ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ

5:37 PM, Thursday, October 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Brahmavaraಬ್ರಹ್ಮಾವರ : ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ವಿಭಾಗದ ವಿಧ್ಯಾರ್ಥಿಗಳಿಂದ ‘ಕಲಿಯೋಣ ಕಂಪ್ಯೂಟರ್, ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ’ ಶಿಬಿರವು ಬ್ರಹ್ಮಾವರದ ಜಾನುವಾರಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಎರಡು ದಿನಗಳ ಶಿಬಿರವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪ್ರತೀ ವರ್ಷ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ತರಹದ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ. ಕಂಪ್ಯೂಟರ್ ವಿಜ್ಞಾನ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸತತ 7 ವರ್ಷಗಳಿಂದ ಗ್ರಾಮೀಣ ಕಂಪ್ಯೂಟರ್ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ವಿಧ್ಯಾರ್ಥಿದ ವತಿಯಿಂದ 2 ಕಂಪ್ಯೂಟರ್ ಅನ್ನು ಶಾಲೆಗೆ ಹಸ್ತಾಂತರಿಸಿದರು.

ಉಡುಪಿ ಜಿಪಂ ಮಾಜಿ ಸದಸ್ಯ ಬಿ.ಕೆ ಹೆಗ್ಡೆ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಕಂಪ್ಯೂಟರ್ ತರಬೇತಿಗಾಗಿ ಗ್ರಾಮೀಣ ಪ್ರದೆಶದಲ್ಲಿರುವ ನಮ್ಮ ಶಾಲೆಯನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಗಳು ಎಂದರು.

ಬಿಲ್ಲಾಡಿ ಗ್ರಾಪಂ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ . ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೊಠಾರಿ, ಕಂಪ್ಯೂಟರ್ ವಿಭಾಗದ ಹಿರಿಯ ಪ್ರಾಧ್ಯಾಪಕ ಹರೀಶ್ ಕುಂದರ್, ಪ್ರಾಧ್ಯಾಪಕ ವಿವೇಕ್ ಶರ್ಮ, ಶುೃತಿ ಶೆಟ್ಟಿ, ಅಂಕಿತಾ ಶೆಟ್ಟಿ ಉಪಸ್ಥಿತರಿದ್ದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸುಮಾರು 15 ಜನ ವಿದ್ಯಾರ್ಥಿಗಳು 2 ದಿನಗಳ ತರಬೇತಿ ಶಿಬಿರದಲ್ಲಿ ಶಾಲೆಯ ಮಕ್ಕಳಿಗೆ ತರಬೇತಿ ನೀಡುವರು.
ಮುಖ್ಯ ಶಿಕ್ಷಕ ವಿಜಯ್ ಕುಮಾರ್ ಸ್ವಾಗತಿಸಿದರು. ರಮ್ಯಾ ಬಿ. ಶೆಟ್ಟಿ ಅವರು ವಂದಿಸಿದರು. ಶಿಕ್ಷಕಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English