ಉಳ್ಳಾಲ : ಅರಬಿ ಸಮುದ್ರದಲ್ಲಿ ಉದ್ಭವಿಸಿರುವ ‘ಮಹಾ’ ಚಂಡಮಾರುತದ ಪರಿಣಾಮ ಉಳ್ಳಾಲದಲ್ಲೂ ಕಾಣಿಸಿಕೊಳ್ಳಲಾರಂಭಿಸಿದ್ದು, ಕಡಲಬ್ಬರಕ್ಕೆ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ.
ಸೋಮೇಶ್ವರ, ಪೆರಿಬೈಲ್, ಬೆಟ್ಟಂಬಾಡಿ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಬೆಟ್ಟಂಪಾಡಿಯಲ್ಲಿ ರೊಹರ ಅಬ್ದುಲ ಎಂಬವರ ಮನೆ ಅಪಾಯದಂಚಿನಲ್ಲಿದೆ. ಅವರ ಮನೆಯ ಸ್ನಾನದ ಕೊಠಡಿ ಈಗಾಗಲೇ ಸಮುದ್ರಪಾಲಾಗಿದೆ.
ಸೋಮೇಶ್ವರ ದೇವಸ್ಥಾನ ಸಮೀಪದ ಮೋಹನ್ ಎಂಬವರ ಮನೆಯ ಸ್ನಾನದ ಕೊಠಡಿ ಸೇರಿದಂತೆ ಒಂದು ಪಾರ್ಶ್ವದ ಗೋಡೆ ಗುರುವಾರ ತಡರಾತ್ರಿ ಸಮುದ್ರಪಾಲಾಗಿದೆ. ಮೋಹನ್ ಅವರು ಬಾಡಿಗೆಗೆ ನೀಡಿದ್ದ ಕಟ್ಟಡ ಅಲೆಗಳ ಅಬ್ಬರಕ್ಕೆ ಸಿಲುಕಿ ಸಂಪೂರ್ಣವಾಗಿ ಸಮುದ್ರಪಾಲಾಗುವ ಭೀತಿ ಎದುರಾಗಿದೆ. ಈಗಾಗಲೇ ಕಟ್ಟಡದ ಒಂದು ಪಾರ್ಶ್ವದ ಅಡಿಪಾಯವೇ ಸಮುದ್ರ ಸೇರಿದ್ದು,ಗೋಡೆಗಳು ಕುಸಿದಿವೆ.
ಇದೇ ಮನೆಯ ಸಮೀಪದ ಶೇಖರ್ ಎಂಬವರಿಗೆ ಸೇರಿದ ತೆಂಗಿನಮರ ಸಮುದ್ರ ಪಾಲಾಗಿದೆ.
Click this button or press Ctrl+G to toggle between Kannada and English