ಉಳ್ಳಾಲ : ಉಳ್ಳಾಲ ಬೈಲು ಮಾಕ್ಸ್ ಪೋರ್ಟ್ – ಮಹಾಗಣಪತಿ ದೇವಸ್ಥಾನ ಅಡ್ಡ ರಸ್ತೆ ದುರವ್ಯಸ್ಥೆಯ ಮತ್ತು ಕಾಂಕ್ರೀಟೀಕರಣಗೊಳಿಸಲು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ನೇತೃತ್ವದಲ್ಲಿ, ಸಾರ್ವಜನಿಕರ ಸಹಕಾರದಿಂದ ಪ್ರತಿಭಟನಾ ಸಭೆ ಶುಕ್ರವಾರ ನಡೆಯಿತು.
ಹೊಂಡ ಗುಂಡಿಗಳಿದ್ದ ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ಉಳ್ಳಾಲ ಬೈಲು ಮಾಕ್ಸ್ ಪೋರ್ಟ್ ಅಡ್ಡ ರಸ್ತೆ ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯು ಸುಮಾರು 3 ವರ್ಷದಿಂದ ಹೊಂಡ ಗುಂಡಿಗಳಿಂದ ತುಂಬಿದ್ದು ಜನರಿಗೆ ನಡೆದಾಡಲು ಕಷ್ಟಕರವಾಗಿದೆ, ಮೂರು ವರ್ಷದಿಂದ ಸ್ಥಳೀಯ ಶಾಸಕರಿಗೆ ಮತ್ತು ಸಂಸದರಿಗೆ ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ , ಸಾರ್ವಕನಿಕರ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡುವ ದೃಷ್ಟಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.
ಆದುದರಿಂದ ಕೂಡಲೇ ರಸ್ತೆಗೆ ಕಾಂಕ್ರೀಟೀಕರಣಗೊಳಿಸಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು 15 ದಿನದ ಗಡುವು ನೀಡುತ್ತಿದ್ದೇವೆ. ಇಲ್ಲವಾದಲ್ಲಿ ಉಳ್ಳಾಲ ನಗರಸಭೆಯ ಎದುರುಗಡೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಬಂಗೇರ, ಮಂಗಳೂರು ನಗರ ಅಧ್ಯಕ್ಷ ಹಸನ್.ಟಿ, ಉಪಾಧ್ಯಕ್ಷ ಶಾರದಾ, ಅಜೀಝ್, ಪ್ರಧಾನ ಕಾರ್ಯದರ್ಶಿ ಫಾರೂಕ್ ಗೋಲ್ಡನ್, ಕಾರ್ಯದರ್ಶಿ ಹಮೀದ್ ಕಾವೂರು, ಯುವ ಘಟಕದ ಕಾರ್ಯದರ್ಶಿ ಶಾನ್, ಉಪಾಧ್ಯಕ್ಷ ತನ್ವೀರ್, ಗಾಯಿಟನ್ಉ ಳ್ಳಾಲ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಪುತ್ತೂರಾಯ, ನಾಗರಿಕರಾದ ಹರೀಶ್ ಆಳ್ವ ಉಳ್ಳಾಲ ಬರಿಕೆ, ರೋಹಿತ್ ಶೆಟ್ಟಿ, ಜೀವನ್, ನವೀನ್ ಚಂದ್ರ, ಲಾವಣ್ಯ, ರತ್ನ , ಗಾಯತ್ರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
Click this button or press Ctrl+G to toggle between Kannada and English