ನ. 6ರಿಂದ 8ರವರೆಗೆ ಪಿಲಿಕುಳದಲ್ಲಿ ಅಂತರ್ ರಾಷ್ಟ್ರೀಯ ಮೊದಲ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ

4:19 PM, Monday, November 4th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Sindu

ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹ ಕ ಸೊಸೈಟಿ ಆಶ್ರಯದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಮೊದಲ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ ಪಿಲಿಕುಳ ದಲ್ಲಿ ನ. 6ರಿಂದ 8ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರತಿದಿನ ಸುಮಾರು 30 ನಿಮಿಷಗಳ ಒಟ್ಟು9 ಪ್ರದರ್ಶನ ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಜಗತ್ತಿನ ವಿವಿಧ ದೇಶಗಳ 3ಡಿ, 2ಡಿ ಚಲನಚಿತ್ರ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಲಿದೆ. ಈ ವೇಳೆಯಲ್ಲಿ ಪಿಲಿಕುಳದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದ ಅಂಗವಾಗಿ 2 ಡಿ, 3ಡಿ ತಾರಾಲಯ ಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಇದೊಂದು ಅಪೂರ್ವ ಅವಕಾಶ. ವಿವರಗಳನ್ನು www.ifpf.in ನಲ್ಲಿ ನೋಡಬಹುದು ಮತ್ತು ಬುಕ್‌ಮೈಶೋ ಮೂಲಕ ಪ್ರದರ್ಶನ ಕ್ಕೆ ಮುಂಗಡವಾಗಿ ಆನ್ ಲೈನ್ ನಲ್ಲಿ ಟಿಕೇಟ್ ಪಡೆಯಬಹುದಾಗಿದೆ ಎಂದು ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ.ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಚಿತ್ರೋತ್ಸವದ ಬಳಿಕ ಸಾರ್ವಜನಿಕ ರಿಗಾಗಿ ನವೆಂಬರ್ 9 ಮತ್ತು 10ರಂದು ನಡೆಯಲಿದೆ.

ಇನ್ನೋವೇಶನ್ ಟೆಕ್ನಾಲಜೀಸ್ ಮುಂಬೈ ಮತ್ತು ಇವಾನ್ಸ್ ಸದರ್ ಲ್ಯಾಂಡ್ ಯುಎಸ್ಎ ಸಹಯೋಗದೊಂದಿಗೆ ಈ ಉತ್ಸವ ನಡೆಯಲಿದೆ. ನ. 7ರಂದು ಆಯ್ದ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆ.ವಿ.ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English