ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದ ಪ್ರೇಮಾನಂದ ಶೆಟ್ಟಿ ಮಂಗಳಾದೇವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಕಾರ್ಪೋರೇಟರ್ ಆಗಿ ಜನಾನುರಾಗಿಯಾಗಿದ್ದಾರೆ ಪ್ರೇಮಾನಂದ ಶೆಟ್ಟಿ. ಮಹಾನಗರ ಪಾಲಿಕೆಯ 56ನೇ ವಾರ್ಡಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ಆರು ಕೋಟಿ ರೂಪಾಯಿಗೆ ಹೆಚ್ಚಿನ ಮೊತ್ತದ ಅನುದಾನದಲ್ಲಿ ವಿವಿಧ ಅಬಿವೃದ್ಧಿ ಕೆಲಸಗಳು ನಡೆದಿವೆ. ಈ ವಾರ್ಡ್‌ನ ಪ್ರಮುಖ ರಸ್ತೆಗಳು ಕಾಂಕ್ರೀಟ್‌ಮಾಡಲಾಗಿದ್ದು ಕೆಲವೊಂದು ಒಳರಸ್ತೆಗಳಿಗೂ ಹಿಂದೆಯಷ್ಟೇ ಡಾಮರೀಕರಣ ಮಾಡಲಾಗಿದೆ.
ಸುಭಾಷ್‌ನಗರ-ಮಂಗಳಾದೇವಿ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ, ಶಿವನಗರ ಬಡಾವಣೆ ಮುಖ್ಯ ರಸ್ತೆ ಕಾಂಕ್ರೀಟಿಕರಣ, ಒಳರಸ್ತೆ ಡಾಮರೀಕರಣ, ಮಂಗಳಾನಗರ ರಸ್ತೆ ಡಾಮರೀಕರಣ, ಸುಭಾಷ್‌ನಗರ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೆ, ಪರಿಶಿಷ್ಟ ಜಾತಿ ಕಾಲನಿ, ಶಾಂತಾ ಆಳ್ವ ಕಾಂಪೌಂಡ್‌ರಸ್ತೆ ಡಾಮರೀಕರಣ, ಒಳಚರಂಡಿ ವ್ಯವಸ್ಥೆ ಕಾಮಗಾರಿ, ಶಾಂತಾ ಆಳ್ವ ಕಾಂಪೌಂಡ್‌ಪ್ರದೇಶದಲ್ಲಿ ಸಮುದಾಯ ಭವನ ರಚನೆ ಮಾಡಲಾಗಿದೆ. ಮಂಗಳಾದೇವಿ ಬಸ್‌ನಿಲ್ದಾಣಕ್ಕೆ ವಾರ್ಡ್‌ನಲ್ಲಿ ಎರಡು ಎಕ್ರೆ ಜಾಗ ನಿಗದಿ ಮಾಡಿಲಾಗಿದ್ದು, ಹೊಸ ಬಸ್ ತಂಗುದಾಣ ಮತ್ತು ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವವಿದೆ.
ಮಂಗಳಾದೇವಿ ವಾರ್ಡ್‌ನಲ್ಲಿ ಪಾಳುಬಿದ್ದಿದ್ದ ಎರಡು ಪಾರ್ಕ್‌ಗಳಿಗೆ ಕಾಯಕಲ್ಪ ನೀಡಲಾಗಿದೆ. ಜಪ್ಪು ಪಾರ್ಕ್‌ನ್ನು ಸುಮಾರು 15 ಲ.ರೂ. ವೆಚ್ಚದಲ್ಲಿ ಮತ್ತು ಮಂಗಳಾನಗರದಲ್ಲಿದ್ದ ಪಾರ್ಕ್‌ನ್ನು ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಎಮ್ಮೆಕೆರೆ ಬಳಿ ಇರುವ ಆಚಾರಿಹಿತ್ಲು ಕಂಪೌಂಡ್‌ನಪರಿಶಿಷ್ಟ ಜಾತಿ ಕಾಲನಿಯಲ್ಲಿ ರಾಜ್ಯ ಸರಕಾರದ 50 ಲಕ್ಷ ರೂ. ಎಸ್‌ಸಿ/ ಎಸ್‌ಟಿ ನಿಧಿಯಿಂದ ಸಮುದಾಯ ಭವನದ ಅಭಿವೃದ್ಧಿ ಮಾಡಲಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇನ್ನು, ವಾರ್ಡ್‌ನ ಜಪ್ಪು ಪಾರ್ಕ್, ಜಪ್ಪು ಭಾರತ್ ಮೈದಾನ ಮತ್ತು ಮಂಗಳಾನಗರದಲ್ಲಿ ಅಂಗನವಾಡಿ ಇದ್ದು, ವಾರ್ಡ್‌ನಲ್ಲಿ ಯಾವುದೇ ಸರಕಾರಿ ಶಾಲೆಗಳಿಲ್ಲ.
ಸ್ಮಾರ್ಟ್‌ಸಿಟಿ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‌ಮೆಂಟ್) ಯೋಜನೆಯಲ್ಲಿ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೇರಲಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಬೇಕಿದೆ.
Click this button or press Ctrl+G to toggle between Kannada and English