ಜೆಪ್ಪುನಲ್ಲಿ ಐವನ್ ಡಿಸೋಜ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

12:07 PM, Tuesday, November 12th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

jeppu

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯು ಇವತ್ತು ಮುಂಜಾನೆ 7.00 ಸರಿಯಾಗಿ ನಡೆಯಿತು .ಹೆಚ್ಚಿನ ನಾಗರಿಕರು ಈ ಮತಯಾಚನೆ ಯಲ್ಲಿ ಭಾಗವಹಿಸಿದರು .  ಆದರೆ ನಗರದ 39 ನೇ ವಾರ್ಡ್ ಬಿ ಜೆ ಪಿ ಹಾಗು ಕಾಂಗ್ರೆಸ್ ಮುಖಂಡರು 100 ಮೀ ಒಳಗಡೆ ಪ್ರವೇಶಿಸಿ ಮತಯಾಚನೆ ಮಾಡಿದನ್ನು ನಾಗರಿಕರು ಪೊಲೀಸರಿಗೆ ತಿಳಿಸಿ ಅದನ್ನು ಪೋಲಿಸಿರು ಅದನ್ನು ತಡೆದರು.

jeppu

ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

ನಗರದ ಫಳ್ನೀರ್ ವಾರ್ಡ್ ನ ಜೆಪ್ಪುನಲ್ಲಿ ಘಟನೆ ವರದಿಯಾಗಿದೆ.

jeppu

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಒತ್ತಾಯ ನಡೆಸುತ್ತಿದ್ದರು. ಚುನಾಯಿತ ಪ್ರತಿನಿಧಿಗಳು ಮತಗಟ್ಟೆ ಬಳಿ ಹಾಜರಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮತದಾರರನ್ನು ಸೆಳೆಯಲು ನಾವು ಶಾಸಕರು ಹಾಗೂ ಸಂಸದರನ್ನು ಸ್ಥಳಕ್ಕೆ ಕರೆಯುತ್ತೆವೆ ಎಂದ ಬಿಜೆಪಿ ಕಾರ್ಯಕರ್ತರು ಐವನ್ ಡಿಸೋಜ ವಿರುದ್ಧ ಗರಂ ಆದ ಘಟನೆ ವರದಿಯಾಗಿದೆ.

ಮಧ್ಯ ಪ್ರವೇಶಿಸಿದ ಪೊಲೀಸರುಮತದಾರರಿಗೆ ಮುಕ್ತವಾಗಿ ಮತಚಲಾಯಿಸುವಂತೆ ಅವಕಾಶ ಮಾಡಿಕೊಡಬೇಕು ಎಂದು ಎರಡು ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.

jeppu

jeppu

 

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English