ಮಂಗಳೂರು : ಈರುಳ್ಳಿ ಬೆಲೆ ನಿಯಂತ್ರಿಸಲು ಒತ್ತಾಯಿಸಿ ಗುರುವಾರದಂದು ಬಂದರಿನ ಕಾರ್ಮಿಕರ ಕಟ್ಟೆಯಲ್ಲಿ ಮಂಗಳೂರಿನ ಬಂದರು ಶ್ರಮಿಕರ ಸಂಘದ ವತಿಯಿಂದ ನೇಣು ಹಗ್ಗ ಪ್ರದರ್ಶಿಸಿ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಂದರು ಶ್ರಮಿಕರ ಸಂಘದ ಮುಖಂಡ ಬಿ.ಕೆ ಇಮ್ತಿಯಾಝ್ ಅವರು ಮಾತನಾಡಿ, ವಿದೇಶದಿಂದ ಈರುಳ್ಳಿ ಆಗಮನದ ಬಳಿಕ ಈರುಳ್ಳಿ ದರ ಇಳಿಕೆಯಾಗುವ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದರು.
ಕಾರ್ಮಿಕ ಹಸನ್ ಮೋನು ಮಾತನಾಡಿ, ಈರುಳ್ಳಿ ಬೆಲೆ ಏರಿಕೆಯಿಂದ ಈರುಳ್ಳಿ ವ್ಯಾಪಾರ ಕುಂಠಿತವಾಗಿ ಬಂದರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಪರಿಣಾಮ ಹಮಾಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ ಎಂದರು.
ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾಯುವ ಪರಿಸ್ಥಿತಿ ಬಂದಿದೆ ಎಂದು ತೋರಿಸುವ ಮೂಲಕ ಜನರ ಸಮಸ್ಯೆಯನ್ನು ಈ ಪ್ರತಿಭಟನೆ ಮೂಲಕ ಸಾಂಕೇತಿಕವಾಗಿ ತೋರಿಸಲಾಯಿತು. ಈರುಳ್ಳಿ ಹಾರ, ಈರುಳ್ಳಿ ನೇಣು ಪ್ರದರ್ಶನದ ಮೂಲಕ ಮಂಗಳೂರಿನ ಬಂದರು ಕಾರ್ಮಿಕರು ತಮ್ಮ ಸಂಕಷ್ಟ ತೋಡಿಕೊಂಡರು.
Click this button or press Ctrl+G to toggle between Kannada and English