ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್​ ಸೋಲಿಗೆ ಸಿಪಿ ಯೋಗೀಶ್ವರ್​ ಕಾರಣ : ಜಿಟಿ ದೇವೇಗೌಡ

2:06 PM, Wednesday, December 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

GT-Deve-Gowda

ಮೈಸೂರು : ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಸೋಲಿಗೆ ಸಿಪಿ ಯೋಗೀಶ್ವರ್ ಕಾರಣ. ಸಮುದಾಯದ ನಾಯಕರನ್ನು ಟೀಕಿಸಿದ ಕಾರಣ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು ಎಂದು ಜೆಡಿಎಸ್ ನಾಯಕ ಜಿಟಿ ದೇವೇಗೌಡ ತಿಳಿಸಿದ್ದಾರೆ.

ನನ್ನ ಸೋಲಿಗೆ ಜಿಟಿ ದೇವೇಗೌಡ, ಕುಮಾರಸ್ವಾಮಿ, ದೇವೇಗೌಡ ಎಂದು ವಿಶ್ವನಾಥ್ ಆರೋಪಿಸುತ್ತಾರೆ. ಆದರೆ, ಇದು ಸುಳ್ಳು. ಅವರ ಸುಳ್ಳಿಗೆ ಅವರ ಪಕ್ಷದ ನಾಯಕರು ಹಾಗೂ ವಿಶ್ವನಾಥ್ ಹುಂಬತನ ಕಾರಣ ಎಂದು ಹರಿಹಾಯ್ದರು.

ವಿಶ್ವನಾಥ್ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸಬಹುದು ಎಂದು ಕೊಂಡರು. ದುಡ್ಡು, ಸೀತೆ, ಕುಕ್ಕರ್ ಹಂಚಿ ಗೆಲ್ಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಆದರೆ, ಇದೆಲ್ಲಾ ಹುಣಸೂರಿನಲ್ಲಿ ನಡೆಯುವುದಿಲ್ಲ. ಅದು ಅವರಿಗೆ ಗೊತ್ತಿಲ್ಲ ಎನ್ನಿಸುತ್ತದೆ ಎಂದು ತಿರುಗೇಟು ನೀಡಿದರು.

ಈ ಬಾರಿ ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ನಾನು ದೇವೇಗೌಡರ ಸಮ್ಮುಖದಲ್ಲಿಯೇ ಹೇಳಿದೆ,. ಹಾಗಾಗಿ ಈ ಚುನಾವಣೆಯಲ್ಲಿ ಯಾರ ಪರವಾಗಿಯೂ ನಾನು ಕೆಲಸ ಮಾಡಿಲ್ಲ. ಇನ್ನು ನನ್ನ ಮಗ ಹರೀಶ್ ಗೌಡ ಮಂಜುನಾಥ್ ಬೆನ್ನಿಗೆ ನಿಂತಿದ್ದ ಎಂದರು. ಅದು ಅವನ ಸ್ವ ಇಚ್ಛೆ. ಆತ ಯಾವ ಪಕ್ಷಕ್ಕೂ ಸದಸ್ಯನಲ್ಲ ಎಂದರು.

ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಈ ಹಿಂದೆ ಪುರಭವನದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೆ. ಕುಮಾರ ಪರ್ವದಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ಹೇಳಿದ್ದೆ. ನಾನು ಹೇಳಿದಂತೆ ನಡೆದಿದೆ. ದೈವಶಕ್ತಿಯಿಂದ ನಾನು ಹೇಳಿದ್ದೆಲ್ಲ ನಡೆದಿದೆ ಎಂದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English