ಮಡಿಕೇರಿ : ಐಗೂರು, ಕಾಜೂರು ಉಪವಿಭಾಗ ಅರಣ್ಯ ಇಲಾಖೆಯ ಗಾರ್ಡ್ ಲಂಚ ಪಡೆಯುವ ವೇಳೆ ಕೊಡಗು ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಸಿಲುಕಿಕೊಂಡಿದ್ದಾನೆ.
ಅರಣ್ಯ ಇಲಾಖೆ ಸಿಬ್ಬಂದಿ ಯತೀಶ್ ಎಂಬಾತ ಇದೀಗ ಎಸಿಬಿ ವಶದಲ್ಲಿದ್ದು ತನಿಖೆ ನಡೆಸಲಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಮರವನ್ನು ಕಡಿದಿರುವುದಾಗಿ ವ್ಯಕ್ತಿಯೊಬ್ಬನನ್ನು ಬೆದರಿಸಿ ಆತನನಿಂದ ರೂ.50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾನೆ.
ಬಳಿಕ ರೂ.30 ಸಾವಿರ ನೀಡಬೇಕೆಂದು ಅಂತಿಮಗೊಳಿಸಿ ಮೊದಲು 10 ಸಾವಿರ ಹಣವನ್ನು ಪಡೆದುಕೊಂಡಿದ್ದ. ಉಳಿದ ೨೦ ಸಾವಿರ ರೂ. ಲಂಚದ ಹಣವನ್ನು ಕಚೇರಿಯಲ್ಲಿ ಸ್ವೀಕರಿಸುವ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿ ಯತೀಶ್‌ನನ್ನು ಲಂಚದ ಹಣ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಡಗು ಎಸಿಬಿಯ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕರಾದ ಮಹೇಶ್, ಶ್ರೀಧರ್ ಸಿಬ್ಬಂದಿಗಳಾದ ದಿನೇಶ್, ಸಜನ್, ಪ್ರವೀಣ್, ದೀಪಿಕಾ, ಪ್ರವೀಣ್, ಲೋಹಿತ್, ಸುರೇಶ್, ರಾಜೇಶ್ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English