ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಎಸ್‌ಡಿಎ ಕ್ಲಾರ್ಕ್ ಎಸಿಬಿ ಬಲೆಗೆ

Tuesday, January 5th, 2021
Mohammed-Rafeeq

ಮಂಗಳೂರು: ನಗರದ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಸ್‌ಡಿಎ ಕ್ಲಾರ್ಕ್ ಒಬ್ಬರನ್ನು  ರೆಡ್ ‌ಹ್ಯಾಂಡ್‌ ಆಗಿ ಮಂಗಳವಾರ  ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್  (42) ಬಂಧಿತ ಆರೋಪಿಯಾಗಿದ್ದು, ಕಚೇರಿಯ ಕೆಲಸ‌‌ವೊಂದನ್ನು ಮಾಡಿಕೊಡಲು ಹಿರಿಯ ನಾಗರೀಕರೊಬ್ಬರಿಂದ 40 ಸಾವಿರ ರೂ. ಲಂಚದ‌ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಸಂತ್ರಸ್ತರು ದೂರು ದಾಖಲಿಸಿರುವ ಹಿನ್ನೆಲೆ ಆರೋಪಿಗೆ ನಗದು ನೀಡುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ. ತಕ್ಷಣ ಆರೋಪಿಯನ್ನು ಬಂಧಿಸಿ, ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಅಧಿಕಾರಿಗಳು […]

ವಿಶೇಷ ಮಹಿಳಾ ತಹಶೀಲ್ದಾರ್ 5 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ

Tuesday, October 6th, 2020
Tahashidar Lakshmi

ಬೆಂಗಳೂರು: ದಕ್ಷಿಣ ತಾಲೂಕಿನ ಕೆಜಿ ರೋಡ್‍ನಲ್ಲಿರುವ ತಹಶೀಲ್ದಾರ್ ಕಚೇರಿ ವಿಶೇಷ ಮಹಿಳಾ ತಹಶೀಲ್ದಾರ್ ಲಕ್ಷ್ಮೀ ಮತ್ತು ಕ್ಲರ್ಕ್ ಪ್ರಸನ್ನಕುಮಾರ್ ಎಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನಿನ ಆರ್ಟಿಸಿ ಮಾಡಿಕೊಡುವುದಕ್ಕೆ ಅಧಿಕಾರಿಗಳು 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ.  ಇದರಲ್ಲಿ 5 ಲಕ್ಷ ತಹಶೀಲ್ದಾರ್ ಲಕ್ಷ್ಮೀಗೆ ಹಾಗೂ ಉಳಿದ ಎರಡು ಲಕ್ಷ ಕ್ಲರ್ಕ್ ಪ್ರಸನ್ನಕುಮಾರಿಗೆ ಎಂದು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಎಸಿಬಿ  ಡಿವೈ ಎಸ್ಪಿ ತಮ್ಮಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ […]

ಮಡಿಕೇರಿ : ಅರಣ್ಯ ಇಲಾಖೆ ಗಾರ್ಡ್ ಎಸಿಬಿ ಬಲೆಗೆ

Friday, December 13th, 2019
ACB

ಮಡಿಕೇರಿ : ಐಗೂರು, ಕಾಜೂರು ಉಪವಿಭಾಗ ಅರಣ್ಯ ಇಲಾಖೆಯ ಗಾರ್ಡ್ ಲಂಚ ಪಡೆಯುವ ವೇಳೆ ಕೊಡಗು ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಸಿಲುಕಿಕೊಂಡಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಯತೀಶ್ ಎಂಬಾತ ಇದೀಗ ಎಸಿಬಿ ವಶದಲ್ಲಿದ್ದು ತನಿಖೆ ನಡೆಸಲಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಮರವನ್ನು ಕಡಿದಿರುವುದಾಗಿ ವ್ಯಕ್ತಿಯೊಬ್ಬನನ್ನು ಬೆದರಿಸಿ ಆತನನಿಂದ ರೂ.50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾನೆ. ಬಳಿಕ ರೂ.30 ಸಾವಿರ ನೀಡಬೇಕೆಂದು ಅಂತಿಮಗೊಳಿಸಿ ಮೊದಲು 10 ಸಾವಿರ ಹಣವನ್ನು ಪಡೆದುಕೊಂಡಿದ್ದ. ಉಳಿದ ೨೦ ಸಾವಿರ ರೂ. ಲಂಚದ ಹಣವನ್ನು […]

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ನಿವಾಸಗಳ ಮೇಲೆ ಎಸಿಬಿ ದಾಳಿ

Thursday, October 3rd, 2019
s-Moorthy

ಬೆಂಗಳೂರು : ದಂದು ವೆಚ್ಚ ಆರೋಪ ಹಾಗೂ ಸರ್ಕಾರದ ಮಹತ್ವದ ಸೀಲ್(ಮುದ್ರೆ)ಗಳ ದುರುಪಯೋಗದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ನಿವಾಸಗಳ ಮೇಲೆ ಗುರುವಾರ ಎಸಿಬಿ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಸ್.ಮೂರ್ತಿ ಸೀಲ್ ಗಳ ದುರುಪಯೋಗಪಡಿಸಿಕೊಂಡಿರುವ ಆರೋಪ ಬಂದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ಗುರುವಾರ ಬೆಳಗ್ಗೆ ಸದಾಶಿವನಗರ, ಆರ್ ಟಿ ನಗರದ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಕೊಡಗು ಬಳಿಯ ಕಾಫಿ ತೋಟದ […]

ಐತೂರು ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ

Tuesday, June 4th, 2019
Prem-singh-nayak

ಮಂಗಳೂರು :  ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ್ ಸಿಂಗ್ ನಾಯಕ್ ಜಾಗದ ಖಾತೆ ಬದಲಾವಣೆಗೆ ಲಂಚ ಪಡೆಯುವಾಗ ಎಸಿಬಿ ಬಲೆಗೆ  ಬಿದ್ದಿದ್ದಾರೆ. ಕಡಬ ನಿವಾಸಿ ಸಾಹುಲ್ ಹಮೀದ್ ಎಂಬುವರ ತಾಯಿಯ ಹೆಸರಿಂದ ಸಾಹುಲ್ ಹೆಸರಿಗೆ 10.4 ಸೆಂಟ್ಸ್ ಜಾಗದ ಖಾತೆ ಬದಲಾವಣೆಗೆ 9/11ರ ಅರ್ಜಿ ಸಲ್ಲಿಸಿದ್ದರು. ಮೊದಲು 8 ಸಾವಿರ ರೂ. ಜಮಾ ಮಾಡಿದ್ದಾರೆ. ಮತ್ತೆ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸೋಮವಾರ ಗುರುವಾಯನಕೆರೆಗೆ ಬಂದು ಹಣ ನೀಡುವಂತೆ ಹೇಳಿದ್ದರಂತೆ. 9 ಸಾವಿರ ನೀಡುವಾಗ […]

ಲಂಚ ಪಡೆಯುತ್ತಿದ್ದಾಗ ಗ್ರಾಮ ಕರಣಿಕ ಎಸಿಬಿ ಬಲೆಗೆ

Sunday, May 5th, 2019
VA

ಬೆಳ್ತಂಗಡಿ : ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕರಣಿಕ ಮತ್ತು ಆತನ ಸಹಾಯಕ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆಬೆಳ್ತಂಗಡಿ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಕಡಿರುದ್ಯಾವರ- ಮಿತ್ತಬಾಗಿಲು ಗ್ರಾಮ ಕರಣಿಕ ಮತ್ತು ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗ್ರಾಮ ಕರಣಿಕ ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆರ್.ಟಿ.ಸಿ ಯೊಂದರ ಹೆಸರು ಬದಲಾವಣೆಗಾಗಿ ಲಂಚ […]

ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳ: ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ

Friday, December 28th, 2018
anti-corruption

ಬೆಂಗಳೂರು: ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಾದ ಬೆಂಗಳೂರು, ಉಡುಪಿ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು ತಾಲೂಕು ಕೇಂದ್ರಗಳಾದ ಹುಣಸೂರು, ಕಾರವಾರ, ಮಂಗಳೂರು, ಚಿಂಕತಾಮಣೆ ಸೇರಿದಂತೆ ಇತರೆ ಕಡೆ ದಾಳಿ ನಡೆಸಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ‌ ಮೇಲೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಐವರು ಸರ್ಕಾರಿ ಆಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ […]

ಆನೇಕಲ್​ ತಾಲೂಕು ಕಚೇರಿ ನೌಕರ ಎಸಿಬಿ ಬಲೆಗೆ

Tuesday, December 11th, 2018
acb-bengaluru

ಬೆಂಗಳೂರು: ಲಂಚ ಪಡೆದ ಆರೋಪದ ಮೇಲೆ ಆನೇಕಲ್ ತಾಲೂಕು ಕಚೇರಿ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾನೆ. ಆನೇಕಲ್ ತಾಲೂಕು ಕಚೇರಿಯ ಎಸ್ಡಿಎ ಆಗಿರುವ ಕೃಷ್ಣಮೂರ್ತಿ ಎಸಿಬಿ ಬಲೆಗೆ ಬಿದ್ದಿರುವ ನೌಕರ. ಜೊತೆಗೆ ಕೃಷ್ಣಮೂರ್ತಿಗೆ ಸಹಕಾರ ನೀಡಿದ ಆನಂದ್ ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಕೋಲಾರ ಜಿಲ್ಲೆಯ ಧನಮಟ್ನಹಳ್ಳಿಯ ನಿವಾಸಿವೋರ್ವರು ಖಾತೆ ಮಾಡಿಕೊಡಲು ಕೃಷ್ಣಮೂರ್ತಿಯನ್ನು ಎಡತಾಕಿದ್ದರು. ಈ ವೇಳೆ ಖಾತೆಗಾಗಿ ಒಂದು ಲಕ್ಷ ರೂಪಾಯಿಯನ್ನು ಕೃಷ್ಣಮೂರ್ತಿ, ಮಧ್ಯವರ್ತಿ ಆನಂದ್ರಿಂದ ಬೇಡಿಕೆ ಇಡಿಸಿದ್ದರು ಎನ್ನಲಾಗ್ತಿದೆ. ಬಳಿಕ ಖಾತೆದಾರ ತಾಲೂಕು ಕಚೇರಿಯಲ್ಲಿ […]

ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು

Tuesday, June 12th, 2018
complient

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ವಿರುದ್ಧ ಅಧಿಕಾರ ದುರ್ಬಳಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯಲ್ಲಿ ದೂರು ದಾಖಲಿಸಲಾಗಿದೆ. ಉದ್ಯೋಗ ಮತ್ತಿ ತರಬೇತಿ ಇಲಾಖೆಯ ಮಾಜಿ ನೌಕರ ಶಂಕರ ದೇವೇಗೌಡ ಎಂಬುವರು ಈ ದೂರು ನೀಡಿದ್ದಾರೆ. ಉದ್ಯೋಗ ಮತ್ತು ತರಬೇತಿ ಇಲಾಖೆಯ ಒಟ್ಟು 62 ಜನರಿಗೆ ಹಿಂಬಡ್ತಿ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೂ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರು ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಸುಪ್ರೀಂ ಆದೇಶ ಜಾರಿಗೆ ತರದಂತೆ […]

ಎಸಿಬಿಯನ್ನು ಐಟಿ ಅಧಿಕಾರಿಗಳ ಮೇಲೆ ಛೂ ಬಿಡುವ ಮೂಲಕ ರಾಜ್ಯಕ್ಕೆ ಅವಮಾನ :ಶೋಭಾ ಕರಂದ್ಲಾಜೆ

Friday, October 6th, 2017
shoba

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ, ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಮೂಲಕ ರಾಜ್ಯಕ್ಕೆ ಅವಮಾನ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು  ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಇತಿಹಾಸದಲ್ಲೇ ಮೊದಲು ಎಂಬಂತೆ ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಕೆಲಸ ನಡೆಯುತ್ತಿದೆ ಈ ಮೂಲಕ ಸಿದ್ರಾಮಯ್ಯ ಅವರದ್ದು ಭಂಡ ಸರ್ಕಾರ ಎಂದು ಮತ್ತೆ ಪ್ರೂವ್ ಆಗ್ತಿದೆ. ಭ್ರಷ್ಟಾಚಾರ ರಕ್ಷಿಸಲು ಎಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ. ಐಟಿ ಅಧಿಕಾರಿಗಳ […]