ಬೆಂಗಳೂರು: ಲಂಚ ಪಡೆದ ಆರೋಪದ ಮೇಲೆ ಆನೇಕಲ್ ತಾಲೂಕು ಕಚೇರಿ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಆನೇಕಲ್ ತಾಲೂಕು ಕಚೇರಿಯ ಎಸ್ಡಿಎ ಆಗಿರುವ ಕೃಷ್ಣಮೂರ್ತಿ ಎಸಿಬಿ ಬಲೆಗೆ ಬಿದ್ದಿರುವ ನೌಕರ. ಜೊತೆಗೆ ಕೃಷ್ಣಮೂರ್ತಿಗೆ ಸಹಕಾರ ನೀಡಿದ ಆನಂದ್ ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಕೋಲಾರ ಜಿಲ್ಲೆಯ ಧನಮಟ್ನಹಳ್ಳಿಯ ನಿವಾಸಿವೋರ್ವರು ಖಾತೆ ಮಾಡಿಕೊಡಲು ಕೃಷ್ಣಮೂರ್ತಿಯನ್ನು ಎಡತಾಕಿದ್ದರು. ಈ ವೇಳೆ ಖಾತೆಗಾಗಿ ಒಂದು ಲಕ್ಷ ರೂಪಾಯಿಯನ್ನು ಕೃಷ್ಣಮೂರ್ತಿ, ಮಧ್ಯವರ್ತಿ ಆನಂದ್ರಿಂದ ಬೇಡಿಕೆ ಇಡಿಸಿದ್ದರು ಎನ್ನಲಾಗ್ತಿದೆ. ಬಳಿಕ ಖಾತೆದಾರ ತಾಲೂಕು ಕಚೇರಿಯಲ್ಲಿ ಆನಂದ್ ಮೂಲಕ 40 ಸಾವಿರ ರೂಪಾಯಿ ಲಂಚ ನೀಡುವಾಗ, ಖುದ್ದು ಎಸಿಬಿ ಬಲೆಗೆ ಕೃಷ್ಣಮೂರ್ತಿ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಕೋದಂಡರಾಮ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಿಚಾರಣೆ ಮುಂದುವರೆದಿದೆ. ಕೃಷ್ಣಮೂರ್ತಿ ಮತ್ತು ಆನಂದ್ರನ್ನ ಬಂಧಿಸಿ ವಿಚಾರಣೆಯಲ್ಲಿ ತೊಡಗಿದ್ದಾರೆ.
Click this button or press Ctrl+G to toggle between Kannada and English