ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ, ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಮೂಲಕ ರಾಜ್ಯಕ್ಕೆ ಅವಮಾನ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಇತಿಹಾಸದಲ್ಲೇ ಮೊದಲು ಎಂಬಂತೆ ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಕೆಲಸ ನಡೆಯುತ್ತಿದೆ ಈ ಮೂಲಕ ಸಿದ್ರಾಮಯ್ಯ ಅವರದ್ದು ಭಂಡ ಸರ್ಕಾರ ಎಂದು ಮತ್ತೆ ಪ್ರೂವ್ ಆಗ್ತಿದೆ. ಭ್ರಷ್ಟಾಚಾರ ರಕ್ಷಿಸಲು ಎಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ. ಐಟಿ ಅಧಿಕಾರಿಗಳ ಮೇಲೆ ಆರೋಪ ಇದ್ರೆ ಸಿಬಿಐ ತನಿಖೆಗೆ ಹಾಕಬೇಕಿತ್ತು ಆದ್ರೆ ಪರಿಮಿತಿ ಇಲ್ಲ ಕಾನೂನೇ ಇಲ್ಲದ ಕೆಲಸಕ್ಕೆ ಮೊದಲ ಬಾರಿ ಸಿಎಂ ಕೈಹಾಕುತ್ತಿದ್ದಾರೆ ಇದು ಸಿದ್ದರಾಮಯ್ಯರದ್ದು ವಿನಾಶಕಾಲೇ ವಿಪರೀತ ಬುದ್ದಿಯಾಗಿದೆ. ಬಿಬಿಎಂಪಿ, ಬಿಡಿಎಯಲ್ಲಿರುವ ಭ್ರಷ್ಟಾಚಾರ ಮುಚ್ಚಿಹಾಕಲು ಇಡಿ, ಐಟಿ ಅಧಿಕಾರಿಗಳನ್ನು ಹೆದರಿಸುವ ಕೆಲಸ ಸಿದ್ದರಾಮಯ್ಯ ಮಾಡಲು ಮುಂದಾಗಿದ್ದಾರೆ ಎಂದರು.
ಮಂಗಳೂರಿನಲ್ಲಿ ಐಸಿಸ್ ಚಟುವಟಿಕೆ ಹಿನ್ನೆಲೆಯಲ್ಲಿ ಈ ಬಗ್ಗೆ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಸಿದ್ದಾರೆ. ಸಿಮಿಯ ಇನ್ನೊಂದು ಮುಖ ಕೆಎಫ್ಡಿ, ಪಿಎಫ್ಐ ಸಂಘಟನೆಗಳಾಗಿದೆ. ಇದೀಗ ಇದರ ಹೊಸ ಮುಖ ಐಸಿಸ್ ಕರಾವಳಿಗೆ ಕಾಲಿಟ್ಟಿದೆ. ರಾಷ್ಟ್ರೀಯ ತನಿಖಾ ದಳದ ಕಚೇರಿ ಮಂಗಳೂರಿನಲ್ಲಿ ಆಗಬೇಕು. ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಕೇಂದ್ರಕ್ಕೆ ಮನವಿ ಮಾಡಿದ್ದೆ. ಬಿಜೆಪಿಗೆ ಪಿಎಫ್ಐ, ಕೆಎಫ್ಡಿ ಜೊತೆ ಸಂಬಂಧವಿಲ್ಲ, ಸಚಿವ ಖಾದರ್ ವೃಥಾ ಆರೋಪ ಹೊರಿಸಿದ್ದಾರೆ. ಸಚಿವ ಖಾದರ್ ಬಿಜೆಪಿಯ ಕ್ಷಮೆಯಾಚಿಸಬೇಕು. ಕೆಎಫ್ಡಿ, ಪಿಎಫ್ಐ ಜೊತೆ ಸ್ನೇಹವಿರುವುದು ಕಾಂಗ್ರೆಸ್ಸಿಗರಿಗಾಗಿದ್ದು ಕೆಎಫ್ಡಿ ಮೇಲಿನ ಕೇಸು ಹಿಂಪಡೆದಿದ್ದೇ ಕಾಂಗ್ರೆಸ್ ಸರಕಾರ ಎಂದು ವಾಗ್ದಾಳಿ ನಡೆಸಿದರು
Click this button or press Ctrl+G to toggle between Kannada and English