ನವದೆಹಲಿ : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಜಪಾನ್ ಪ್ರಧಾನಿ ಭಾರತದ ಪ್ರವಾಸ ರದ್ದುಗೊಳಿಸಿದ್ದಾರೆ.
ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಈ ಭಾನುವಾರ ಸಭೆ ನಿರ್ಧಾರವಾಗಿತ್ತು. ಈ ಸಭೆ ಅಸ್ಸಾಂನ ಗೌವಹತಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಉಲ್ಭಣಗೊಂಡ ಹಿನ್ನೆಲೆ ಈ ಪ್ರವಾಸವನ್ನು ರದ್ದು ಗೊಳಿಸಲಾಗಿದೆ ಎಂದು ರಾಯಿಟರ್ ವರದಿ ಮಾಡಿದೆ.
ಇನ್ನು ಗುರುವಾರ ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಮತ್ತು ಗೃಹ ಸಚಿವರ ನಡುವೆ ಮೇಘಾಲಯದಲ್ಲಿ ಭೇಟಿ ನಿಗದಿಯಾಗಿತ್ತು. ಇದು ಕೂಡ ರದ್ದು ಗೊಂಡಿತಿಉ.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಳೆದೆರಡು ದಿನಗಳಿಂದ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ. ಅಲ್ಲದೇ ಜಪಾನ್ ಪ್ರಧಾನಿಗೆ ಸ್ವಾಗತ ಕೋರಿ ಗುವಾಹತಿಯಲ್ಲಿ ಹಾಕಿದ್ದ ಬ್ಯಾನರ್ನ್ನು ಕಿತ್ತು ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡೆಯ ಕ್ಷಣದವರೆಗೂ ಈ ಭೇಟಿ ಬಗ್ಗೆ ಎರಡು ದೇಶದ ಸರ್ಕಾರಗಳು ಪ್ರಯತ್ನಿಸಿದವು. ಆದರೆ, ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಇದನ್ನು ಕೈಬಿಡಲಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವರ ವಕ್ತಾರ ರವೀಶ್ ಕುಮಾರ್, ಈ ಭೇಟಿ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳಲು ಇಲ್ಲ ಎಂದಿದ್ದಾರೆ.ಕಳೆದವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ಅಬೆ ನಡುವೆ ಡಿ.15ರಿಂದ 17ರವರೆಗೆ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದರು.
Click this button or press Ctrl+G to toggle between Kannada and English