ಮಂಗಳೂರು ಹಿಂಸಾಚಾರದಲ್ಲಿಇಬ್ಬರು ಮೃತ್ಯು , ಮೂವರು ಪೊಲೀಸರಿಗೆ ಗಂಭೀರ ಗಾಯ

2:19 PM, Friday, December 20th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Lati charge ಮಂಗಳೂರು : ಗುರುವಾರ ನಿಷೇಧಾಜ್ಞೆ ಜಾರಿ ನಡುವೆಯೂ ಗುಂಪು ಸೇರಿ ಹಿಂಸಾಚಾರಕ್ಕೆ ಮುಂದಾಗಿದ್ದ ಕೆಲವು ಕಿಡಿಗೇಡಿಗಳಿಗೆ ಲಾಠಿ ಪ್ರಹಾರ, ಅಶ್ರುವಾಯು ದಾಳಿ, ನಿರಂತರ  ಧ್ವನಿ ವರ್ಧಕದ  ಮೂಲಕ ವಿನಂತಿಸಿದರೂ  ಸಂಜೆ 5.30 ರವರೆಗೆ ಕಲ್ಲು ತೂರಾಟ ನಡೆಸುತ್ತಲೇ ಇದ್ದರು.

ಮಂಗಳೂರು ಪೊಲೀಸ್ ಕಮಿಷನರ್ ಪಿ ಹರ್ಷ ಅವರು ಕಲ್ಲು ತೂರಾಟ ಮಾಡುವವರಿಗೆ ವಿನಂತಿಸುತ್ತಲೇ ಇದ್ದರು. ಆದರೂ ಕಿಡಿಗೇಡಿಗಳು ನಿರಂತರ ಹಿಂಸಾಚಾರದ ಕೃತ್ಯವನ್ನು ಮುಂದುವರಿಸಿದ್ದರು.

ಗುರುವಾರ ಸಂಜೆ ವೇಳೆಗೆ ಸ್ಥಳೀಯ ಮುಖಂಡರು ಹಿಂಸಾಚಾರ ಮಾಡಬಾರದು ಎಂದು ವಿನಂತಿಸಿದರು ದಾಳಿ ಕೋರರು ಕಲ್ಲು ತೂರುವುದನ್ನು ನಿಲ್ಲಿಸಲಿಲ್ಲ.

nauseen

ಸಂಜೆ ವೇಳೆ ನಡೆದ  ಹಿಂಸಾಚಾರದಲ್ಲಿ ಗಂಭೀರ ಗಾಯಗೊಂಡಿದ್ದ ಬೆಂಗ್ರೆ ನಿವಾಸಿ ನೌಶೀನ್(23) ಹಾಗೂ ಕಂದಕ್ ನಿವಾಸಿ ಜಲೀಲ್(49)  ಇಬ್ಬರು ಮೃತಪಟ್ಟಿದ್ದಾರೆ, ಮೂವರು ಪೊಲೀಸರಿಗೆ ಗಂಭೀರ ಗಾಯಗಳಾಗಿದೆ ಎಂದು ಪೊಲೀಸ್ ಕಮಿಷನರ್ ದೃಢ ಪಡಿಸಿದ್ದಾರೆ

ಮೃತ ರಲ್ಲಿ ಜಲೀಲ್ ಮೀನು ವ್ಯಾಪಾರಿ ಯಾಗಿದ್ದು ನೌಶೀನ್ ಮೆಕ್ಯಾನಿಕ್  ಆಗಿದ್ದಾರೆ.

lati-charge

lati-charge

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English