ಮಂಗಳೂರು ಹಿಂಸಾಚಾರ ನಡೆಸಿ ಪೋಲೀಸರ ಮೇಲೆ ಹಲ್ಲೆ, ಇಬ್ಬರ ಸಾವು ಮ್ಯಾಜಿಸ್ಟೀರಿಯಲ್ ತನಿಖೆ ಆರಂಭ

Monday, December 30th, 2019
DC jagadeesha

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)  ಹೆಸರಿನಲ್ಲಿ ಡಿ.19 ರಂದು ನಗರದಲ್ಲಿ ಗಲಭೆ ಮತ್ತು ಹಿಂಸಾಚಾರ ನಡೆಸಿ ಪೋಲೀಸರ ಮೇಲೆ ಹಲ್ಲೆ, ಇಬ್ಬರ ಸಾವಿಗೆ ಕಾರಣವಾದ  ಘಟನೆಗೆ  ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಿದೆ. ಅಧಿಕಾರಿಗಳ ತಂಡದಿಂದ ಘಟನಾ ಸ್ಥಳಗಳ ಪರಿಶೀಲನೆ ಜಿ.ಜಗದೀಶ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಗಲಭೆ ನಡೆದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸ್ಟೇಟ್ ಬ್ಯಾಂಕ್ ಪರಿಸರ, ನೆಲ್ಲಿಕಾಯಿ ರಸ್ತೆ ಹಾಗೂ ಬಂದರು ರಸ್ತೆ ಪರಿಸರದಲ್ಲಿ ಮಹಜರು ನಡೆಸಿ […]

ಮಂಗಳೂರು ಹಿಂಸಾಚಾರದಲ್ಲಿ ಪೊಲೀಸರು ಸುಮ್ಮನಿರುತ್ತಿದ್ದರೆ ಹಲವರ ಸಾವು ಸಂಭವಿಸುತ್ತಿತ್ತು

Sunday, December 22nd, 2019
lati charge

ಮಂಗಳೂರು : ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸ್ಟೇಟ್ ಬ್ಯಾಂಕ್ ಬಳಿ ಒಂದು ಕೆಎಸ್ ಆರ್ ಪಿ ಬಸ್ ಮಾತ್ರ ಇತ್ತು ಅದರಲ್ಲಿ ಸೀಮಿತ ಸಿಬ್ಬಂದಿಗಳು ಇದ್ದರು ಜತೆಗೆ ಮಂಗಳೂರು ದಕ್ಷಿಣ ಠಾಣೆಯ ಕರ್ತವ್ಯ ನಿರತ ಅಧಿಕಾರಿಗಳು ಇದ್ದರು, ಅಲ್ಲಿ ಕೆಲವು ಮುಸ್ಲಿಂ ಬಾಂಧವರು ಗುಂಪು ಸೇರಿದ್ದರು. ಪೊಲೀಸರು ಅವರಿಗೆ ನಿಷೇದಾಜ್ಞೆಯನ್ನು ಮನವರಿಕೆ ಮಾಡಿದ್ದರು. ಸ್ವಲ್ಪ ಹೊತ್ತಿನ ನಂತರ ಸುಮಾರು 100 ರಷ್ಟು ಯುವಕರ ಗುಂಪು ಸೇರಿ ಘೋಷಣೆ ಕೂಗ ತೊಡಗಿದರು ಅವರು ನಿಷೇದಾಜ್ಞೆಯ ನಡುವೆಯೂ ಪೊಲೀಸರನ್ನು […]

ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಪುನರಾರಂಭ

Sunday, December 22nd, 2019
mobie network

ಮಂಗಳೂರು: ಮಂಗಳೂರು ಹಿಂಸಾಚಾರದ  ವಿಡಿಯೋಗಳನ್ನು ಮತ್ತು ಪ್ರಚೋದನಕಾರಿ ಸಂದೇಶಗಳನ್ನು ದುರುದ್ದೇಶ ಪೂರಕವಾಗಿ ವಾಟ್ಸ್ ಆಪ್ ಗಳ ಮೂಲಕ ರವಾನಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆ ಶನಿವಾರ  ರಾತ್ರಿ 10 ಗಂಟೆಯ ಸುಮಾರಿಗೆ ಪುನರಾರಂಭಗೊಂಡಿದೆ. ಏರ್ ಟೆಲ್,  ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಂಟರ್ ನೆಟ್ ಸೇವೆಗಳು ಮತ್ತು ಇತರ ನೆಟ್ ವರ್ಕ್ ಸೇವೆಗಳು  ಪುನರಾರಂಭಗೊಂಡಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಕಾಂಗ್ರೆಸ್ ನ ಮುಖಂಡರ ಬಂಧನ

Friday, December 20th, 2019
Ugrappa

ಮಂಗಳೂರು: ಹಿಂಸಾಚಾರ ಕ್ಕೆ ಬಲಿಯಾದ ಇಬ್ಬರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದ ಕಾಂಗ್ರೆಸ್ ನ ಮುಖಂಡರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಕಾಂಗ್ರೆಸ್ ನಾಯಕರಾದ ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್, ವಿ ಎಸ್ ಉಗ್ರಪ್ಪ, ರಮೇಶ್ ಕುಮಾರ್, ಬಸವರಾಜರಾಯ ರೆಡ್ಡಿ ಸೇರಿದಂತೆ ಆರು ಮಂದಿಯ ಕಾಂಗ್ರೆಸ್ ನಿಯೋಗವನ್ನು ಬಜಪೆ ವಿಮಾನನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ತಡೆದಿದ್ದಾರೆ ಎನ್ನಲಾಗಿದೆ.

ಮಂಗಳೂರು ಹಿಂಸಾಚಾರದಲ್ಲಿಇಬ್ಬರು ಮೃತ್ಯು , ಮೂವರು ಪೊಲೀಸರಿಗೆ ಗಂಭೀರ ಗಾಯ

Friday, December 20th, 2019
Lati charge

ಮಂಗಳೂರು : ಗುರುವಾರ ನಿಷೇಧಾಜ್ಞೆ ಜಾರಿ ನಡುವೆಯೂ ಗುಂಪು ಸೇರಿ ಹಿಂಸಾಚಾರಕ್ಕೆ ಮುಂದಾಗಿದ್ದ ಕೆಲವು ಕಿಡಿಗೇಡಿಗಳಿಗೆ ಲಾಠಿ ಪ್ರಹಾರ, ಅಶ್ರುವಾಯು ದಾಳಿ, ನಿರಂತರ  ಧ್ವನಿ ವರ್ಧಕದ  ಮೂಲಕ ವಿನಂತಿಸಿದರೂ  ಸಂಜೆ 5.30 ರವರೆಗೆ ಕಲ್ಲು ತೂರಾಟ ನಡೆಸುತ್ತಲೇ ಇದ್ದರು. ಮಂಗಳೂರು ಪೊಲೀಸ್ ಕಮಿಷನರ್ ಪಿ ಹರ್ಷ ಅವರು ಕಲ್ಲು ತೂರಾಟ ಮಾಡುವವರಿಗೆ ವಿನಂತಿಸುತ್ತಲೇ ಇದ್ದರು. ಆದರೂ ಕಿಡಿಗೇಡಿಗಳು ನಿರಂತರ ಹಿಂಸಾಚಾರದ ಕೃತ್ಯವನ್ನು ಮುಂದುವರಿಸಿದ್ದರು. ಗುರುವಾರ ಸಂಜೆ ವೇಳೆಗೆ ಸ್ಥಳೀಯ ಮುಖಂಡರು ಹಿಂಸಾಚಾರ ಮಾಡಬಾರದು ಎಂದು ವಿನಂತಿಸಿದರು ದಾಳಿ ಕೋರರು ಕಲ್ಲು ತೂರುವುದನ್ನು ನಿಲ್ಲಿಸಲಿಲ್ಲ. ಸಂಜೆ ವೇಳೆ […]