ಮಡಿಕೇರಿ : ಯೂತ್ ಫ್ರೆಂಡ್ಸ್ ವತಿಯಿಂದ ವೀರಾಜಪೇಟೆ ಪ್ರೀಮಿಯರ್ ಲೀಗ್ (ವಿಪಿಎಲ್)ಕ್ರಿಕೆಟ್‌ನ ದ್ವಿತೀಯ ಆವೃತ್ತಿಗೆ ವಿವಿಧ ತಂಡಗಳ ಆಕರ್ಷಕ ಜಾಥದೊಂದಿಗೆ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ಪಂದ್ಯಗಳು ಡಿ.24ರಿಂದ ಆರಂಭಗೊಳ್ಳಲಿದೆ.
ವಿಪಿಎಲ್‌ನ ಅಧಿಕೃತ ತಂಡಗಳ ಸದಸ್ಯರು ಮತ್ತು ಮಾಲೀಕರ ಉದ್ಘಾಟನಾ ಜಾಥಕ್ಕೆ ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಉದ್ಯಮಿ ಪ್ರವೀಣ್ ಅವರು ಚಾಲನೆ ನೀಡಿದರು. ಜಾಥವು ಖಾಸಗಿ ಬಸ್ ನಿಲ್ದಾಣ , ಗೋಣಿಕೊಪ್ಪಲು ರಸ್ತೆಗಾಗಿ ಸಾಗಿ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು. ವಿಪಿಎಲ್‌ನ ಒಟ್ಟು12ತಂಡಗಳ ಮಾಲೀಕರು, 180 ಮಂದಿ ಆಟಗಾರರು, ಆಯೋಜಕರು ಜಾಥದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಮೈದಾನದ ವೇದಿಕೆಯಲ್ಲಿ ವಿಪಿಎಲ್ ಟ್ರೋಫಿಯನ್ನು ವೀರಾಜಪೇಟೆ ನಗರದ ಆರಕ್ಷಕ ವೃತ್ತ ನಿರೀಕ್ಷಕರಾದ ಕ್ಯಾತೆ ಗೌಡ, ಠಾಣಾಧಿಕಾರಿ ಮರಿಸ್ವಾಮಿ, ಟ್ರೋಫಿ ದಾನಿಗಳಾದ ಸಾಗರ್ ಡೆಕೋರೇಟರ‍್ಸ್ ಮಾಲೀಕರಾದ ಸಾಗರ್ ಮತ್ತು ಸ್ಪೋರ್ಟ್ಸ್ ವರ್ಲ್ಡ್ ಮಡಿಕೇರಿ ಮಾಲೀಕರಾದ ಅನ್ಸಫ್ ಮತ್ತು ಆಯೋಜಕರಾದ ಇಮ್ತಿಯಾಜ್, ನಿತಿನ್ ಪು, ಅಭಿಲಾಶ್, ಶವಾಜ್, ಮೊಹೀನ್ ಅನಾವರಣಗೊಳಿಸಿದರು.
ವಿಪಿಎಲ್ ಪಂದ್ಯಗಳು ಡಿ.24 ರಿಂದ ಡಿ.29ರವರೆಗೆ ನಡೆಯಲಿದೆ.
Click this button or press Ctrl+G to toggle between Kannada and English