ಮಂಗಳೂರು : ಕೆ ಪ್ರಕಾಶ್ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಬುಧವಾರ ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಸಭಾಂಗಣದಲ್ಲಿ ನಡೆದ ಉದ್ಯಮಿ, ಸಾಧಕ ಕೆ.ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬಕ್ಕೆ ಆಗಸ್ಟ್ 25, ಬುಧವಾರ ದೇಶ, ವಿದೇಶಗಳಿಂದ ಅವರ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು.
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸ್ಥಳೀಯ ಶಾಸಕರು ಅಲ್ಲದೆ ಬಂಟ ಸಮುದಾಯದ ಗಣ್ಯರ ಸಹಿತ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆ.ಪ್ರಕಾಶ್ ಶೆಟ್ಟಿ ಅಭಿಮಾನಿ ಬಳಗವೇ 60ನೇ ಹುಟ್ಟು ಹಬ್ಬಕ್ಕೆ ಅವರ ಸಾಕ್ಷಿಯಾಯಿತು.
ಉಡುಪಿಯ ಕೊರಂಗ್ರಪಾಡಿ ಎಂಬ ಸಣ್ಣ ಹಳ್ಳಿಯಿಂದ ಸಮಾಜ ಸೇವೆ ಮಾಡಬೇಕು ಎಂಬ ಮಹದಾಶೆಯನ್ನಿಟ್ಟು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಉದ್ಯಮಿ ಪ್ರಕಾಶ್ ಶೆಟ್ಟಿ, ಪರಿಶ್ರಮದಿಂದ ಸಾಮಾನ್ಯ ಹಂತದಿಂದ ಎತ್ತರಕ್ಕೆ ಏರಿದ ಸಾಧಕ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬ ಆಚರಣಾ ಸಮಾರಂಭದಲ್ಲಿ ಹೇಳಿದ್ದಾರೆ.
ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಹಿನ್ನೆಲೆಯಲ್ಲಿ ಬುಧವಾರ ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಸಭಾಂಗಣದಲ್ಲಿ ಪ್ರಕಾಶಾಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಡಿ.19ರಂದು ಬಂಗ್ರಕೂಳೂರಿನಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ಅಶಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗಣ್ಯರು ಸಾಧಕ, ಉದ್ಯಮಿ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿದರು.
ಡಾ.ಅಮೃತ ಸೋಮೇಶ್ವರ, ಡಾ.ಬಿ.ಎಂ.ಹೆಗ್ಡೆ, ಡಾ.ಚಂದ್ರ ಶೇಖರ ಶೆಟ್ಟಿ, ಡಾ.ಸುನಿತಾ ಶೆಟ್ಟಿ,ಅಪ್ಪಣ್ಣ ಹೆಗ್ಡೆ, ಜಯ ಸುವರ್ಣ,ಆರ್.ಎನ್.ಶೆಟ್ಟಿ, ಜಗನ್ನಾಥ ಶೆಟ್ಟಿ, ಎಂ.ಎನ್.ರಾಜೇಂದ್ರ ಕುಮಾರ್, ಎಲ್.ಜಿ.ಸೋನ್ಸ್, ಶಿಮಂತೂರು ನಾರಾಯಣ ಶೆಟ್ಟಿ, ಗೋವಿಂದ ಭಟ್ ಸೂರಿಕು ಮೇರು,ಬನ್ನಂಜೆ ಸಂಜೀವ ಸುವರ್ಣ, ಕೋಟೇಶ್ವರ ಲಕ್ಷ್ಮಿ ನಾರಾಯಣ ಆಚಾರ್ಯ,ಬೋಳ ಸುಬ್ಬಯ್ಯ ಶೆಟ್ಟಿ, ಸಾರಾ ಅಬೂಬಕ್ಕರ್,ನಾರಾಯಣ ರಾವ್ ಪಡುಬಿದ್ರಿ ,ನಗರ ನಾರಾಯಣ ಶೆಣೈ ಮೊದಲಾದ ಸಾಧಕರನ್ನು ತಲಾ ಒಂದು ಲಕ್ಷ ರೂಗಳ ಚಿನ್ನದ ನಾಣ್ಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಅಭಿನಂದನಾ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಸಮಾರಂಭದಲ್ಲಿ ಉಪ ಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಗ್ರಹ ಸಚಿವ ಬಸವರಾಜ ಬೊಮ್ಮಾಯಿ,ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ , ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್, ಹಾಲಾಡಿ ಶ್ರೀ ನಿವಾಸ ಶೆಟ್ಟಿ, ಯು.ಟಿ.ಖಾದರ್, ಐವನ್ ಡಿ ಸೋಜ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿಭಟ್, ಸುಕುಮಾರ ಶೆಟ್ಟಿ, ಸಂಜೀವ ಮಟಂದೂರು, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ಅಂಗಾರ, ರಾಜೇಶ್ ನಾಯ್ಕ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಅಭಯ ಚಂದ್ರ ಜೈನ್,ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸದಾನಂದ ಶೆಟ್ಟಿ, ಎ.ಜೆ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಉದ್ಯಮಿ ಜಿ.ಶಂಕರ್, ಮಾಜಿ ಸಚಿವ ಸಂತೋಷ್ ಕುಮಾರ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಸುರೇಶ್ ಶೆಟ್ಟಿ ಪಡುಬಿದ್ರೆ, ದೇವಾನಂದ ಶೆಟ್ಟಿ,ಬೆಳಪು ದೇವಿ ಪ್ರಸಾದ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಚಲನ ಚಿತ್ರನಟ ರವಿಚಂದ್ರ, ಯುವ ನಟರಾದ ಯಶ್, ಹರಿಪ್ರೀಯ, ಕಾವ್ಯ ಶೆಟ್ಟಿ,ಮನ್ವಿತ, ಪಟ್ಲ ಸತೀಶ್ ರವರ ತಂಡದಿಂದ ಯಕ್ಷಗಾನ ವೈಭವ,ಆಳ್ವಾಸ್ ನುಡಿಸಿರಿ, ವಿರಾಸತ್ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ದೇಶ ವಿದೇಶದಿಂದ ಸಾವಿರಾರು ಪ್ರತಿ ನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ರೂಪೇಶ್ ಶೆಟ್ಟಿ ,ನಿತೇಶ್ ಶೆಟ್ಟಿ ,ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.ಪ್ರಕಾಶ್ ಶೆಟ್ಟಿ ಯ 60 ವರ್ಷ ದ ನೆನಪಿಗಾಗಿ ಪ್ರತಾಪ್ ಶೆಟ್ಟಿ ರಚಿಸಿದ ಹೊಂಬೆಳಕು ಪುಸ್ತಕ ವನ್ನು ಮುಖ್ಯ ಮಂತ್ರಿ ಬಿ.ಎಸ್ . ಯಡಿಯೂರಪ್ಪ ಬಿಡುಗಡೆ ಗೊಳಿಸಿದರು.
ರಾಜೋತ್ಸವ ಪ್ರಶಸ್ತಿ ಯ ನಗದು ಒಂದು ಲಕ್ಷ ರೂಗಳ ಜೊತೆ 25ಲಕ್ಷ ರೂ ಸೇರಿಸಿ 26ಲಕ್ಷ ರೂಪಗಳನ್ನು ಪ್ರಕಾಶ್ ಶೆಟ್ಟಿ ನೆರೆ ಪರಿಹಾರ ನಿಧಿಗೆ ದೇಣಿಗೆ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಸ್ವಾಗತಿಸಿದರು.
Click this button or press Ctrl+G to toggle between Kannada and English