ಮಂಗಳೂರು : ದೇರಳಕಟ್ಟೆ ಬೆಳ್ಮ ಗ್ರಾಮ ಪಂಚಾಯತ್ ವಠಾರದಿಂದ ಪೂರ್ಣಕುಂಭ, ಮಂಗಳವಾದ್ಯ, ಚೆಂಡೆವಾದನ, ಕಂಸಾಳೆ, ಕಥಕ್ಕಳಿ, ಹಾಲಕ್ಕಿ, ವೀರಗಾಸೆ, ಕೀಲುಕುದುರೆ, ಹುಲಿವೇಷ, ಕರಗ ನೃತ್ಯ, ಗೊಂಬೆ ಕುಣಿತ, ಪೂಜಾ ಕುಣಿತ, ಬಣ್ಣದ ಕೊಡೆಗಳ ಜತೆಗೆ ಸಮ್ಮೇಳನಾಧ್ಯಕ್ಷ , ಹಿರಿಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಅವರನ್ನು ಕರೆತಂದು ವಿದ್ವಾನ್ ರಾಮಚಂದ್ರ ಉಚ್ಚಿಲ ವೇದಿಕೆಯಲ್ಲಿ ರತ್ನೋತ್ಸವ-2019-2020 ಉದ್ಘಾಟನೆ ಗೊಂಡಿತು.
ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಗೆ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಪೂಜಾರಿ ಚಾಲನೆ ನೀಡಿದರು. ದೇರಳಕಟ್ಟೆ ರತ್ನ ಎಜ್ಯುಕೇಷನ್ ಟ್ರಸ್ಟ್ ಕೋಶಾಧಿಕಾರಿ ರತ್ನಾವತಿ ಕೊರಗಪ್ಪ ಶೆಟ್ಟಿ ಉಳಿದೋಟ್ಟು ರತ್ನೋತ್ಸವದ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಉದ್ಘಾಟಿಸಿದರು.
ಕನ್ನಡ ನಾಡು ನುಡಿಯ ವೈಭವವನ್ನು ಲೋಕಕ್ಕೆ ಜೊತೆಗೆ ಮಕ್ಕಳ ಒಡಲಾಳದಲ್ಲಿ ಬಿತ್ತರಿಸುವ ಕೆಲಸವನ್ನು ಇಂದು ರತ್ನೋತ್ಸವವು ಮಾಡುತ್ತಿದೆ. ಕನ್ನಡದೊಂದಿಗೆ ತುಳುವನ್ನು ಉಳಿಸುವ ಕೆಲಸ ರತ್ನೋತ್ಸವದಂಥ ಹ ವೇದಿಕೆಯಲ್ಲಿ ನಡೆಯಬೇಕು ಎಂದು ಅವರು ಹೇಳಿದರು
ಹಿರಿಯ ಸಾಹಿತಿ ಪ್ರೊ, ಭುವನೇಶ್ವರಿ ಹೆಗಡೆ ಸಮ್ಮೇಳನದ ಅಧ್ಯಕ್ಷ ತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ. ಪಂಚಾಯತ್ ಸದಸ್ಯರಾದ ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾದ ಶ್ರೀ ಮನೋಹರ್ ಶೆಟ್ಟಿ ನಡಿ ಕಂಬಳ ಗುತ್ತು, ಡಾಕ್ಟರ್ ಚೆನ್ನಪ್ಪ ಗೌಡ, ಕವಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ಹರಿದಾಸ ತೋನ್ಸೆ ಪುಷ್ಕಳ್ ಕುಮಾರ್ , ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶ್ರೀ ಅನ್ಸಾರ್ ಇನೋಳಿ, ಅಬ್ಬಕ್ಕ ಟಿವಿ ಚಾನೆಲ್ ನಿರ್ದೇಶಕರಾದ ಶಶಿಧರ್ ಪೊಯ್ಯತ್ತಬೈಲ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯ ಆರ್ ಶೆಟ್ಟಿ, ನವನೀತ ಶೆಟ್ಟಿ ಕದ್ರಿ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಜನಪದ ನಲಿಕೆ ಮತ್ತು ದಫ್ ಪ್ರದರ್ಶನ. ಬೆಳಿಗ್ಗೆ 11 ಗಂಟೆಯಿಂದ 12 30ರ ತನಕ ಶ್ರೀಯುತ ಡಾಕ್ಟರ್ ಚೆನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ಕರಾವಳಿ ಜನಪದ ಸ್ವರೂಪ ಮತ್ತು ಪಲ್ಲಟಗಳು ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ. ಡಾಕ್ಟರ್ ಗಣನಾಥ ಎಕ್ಕಾರು ರವರು ಕರಾವಳಿ ಜನಪದ ಹಿನ್ನೆಲೆ ಸ್ವರೂಪ , ಡಾಕ್ಟರ್ ಸಾಯಿ ಗೀತ ಹೆಗಡೆಯವರು ಕರಾವಳಿ ಜನಪದದ ಪಲ್ಲಟದ ನೆಲೆಗಳು ಎಂಬುದರ ಬಗ್ಗೆ ವಿಷಯ ಮಂಡನೆ ನಡೆಯಿತು. .
ಬಳಿಕ ಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಂದ ಜನಪದ ಕುಣಿತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ ಒಂದರಿಂದ ಎರಡು ಗಂಟೆ ತನಕ ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಇದರಲ್ಲಿ ವಿಜಯಲಕ್ಷ್ಮಿ ಕೆ., ಪ್ರಸಾದ್ ರೈ , ಶ್ರೀಲಕ್ಷ್ಮೀನಾರಾಯಣ ರೈ, ಹರೇಕಳ, ಶ್ರೀ ಲತೀಶ್ ಎಂ ಸಂಕೊಳಿಕೆ, ಕನ್ನಡ ಭಾಷೆಯ ಕವಿಗಳಾದ ಶ್ರೀ ಮಹಮ್ಮದ್ ಬಡ್ಡೂರು, ಮಚ್ಚೇಂದ್ರನಾಥ ಸಾಲೆತ್ತೂರು ತುಳು ಭಾಷೆಯ ಕವಿಗಳಾಗಿ, ಹಂಝ ಮಲಾರ್ ಬ್ಯಾರಿ ಭಾಷೆ, ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಹವ್ಯಕ, ಎಡ್ವರ್ಡ್ ಲೋಬೊ ಕೊಂಕಣಿ ಭಾಷೆ, ಶ್ರೀ ಎಂ.ನಾ. ಚಂಬಲ್ತಿಮಾರ್ ಮಲಯಾಳಂ ಭಾಷೆ ಕವಿಗಳಾಗಿ ಭಾಗವಹಿಸಲಿದ್ದಾರೆ.
ಬಳಿಕ ಶ್ರೀ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯಲಹರಿ ನಡೆಯಲಿದೆ, 2.45 ರಿಂದ 4 ಗಂಟೆಯ ವರೆಗೆ ಶ್ರೀ ಕೃಷ್ಣಪ್ಪ ಕಿನ್ಯರವರ ನಿರ್ದೇಶನದಲ್ಲಿ ಭವ್ಯ ಶ್ರೀ ಕುಲಕುಂದ ರವರ ಭಾಗವತಿಕೆಯಲ್ಲಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ನರಕಾಸುರ ಮೋಕ್ಷ ‘ ಎಂಬ ಯಕ್ಷಗಾನ ನಡೆಯಲಿದೆ.
ಸಂಜೆ 4 ರಿಂದ 5.30 ರ ವರೆಗೆ ಶ್ರೀಮತಿ ಪ್ರೋ ಭುವನೇಶ್ವರಿ ಹೆಗಡೆಯವರ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಸಮಾರೋಪವು ನಡೆಯಲಿದೆ. ಸಮಾರೋಪದಲ್ಲಿ ಕರ್ನಾಟಕ ಸರಕಾರದ ಮುಜರಾಯಿ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ. ಈ ಸಂಧರ್ಭ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಶ್ರೀ ಕುದ್ರೋಳಿ ಗಣೇಶ್ ರವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಯುಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್, ರೋಟರಿ ಜಿಲ್ಲೆ 3181 ಇದರ ಪಿಡಿಜಿ ಯಾದ ಶ್ರೀ ಡಿ ಆರ್ ನಾಗಾರ್ಜುನ, ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಸತ್ತಾರ್ ಕೀರ್ತಿ ಟೈಲ್ಸ್ ಉಡುಪಿ ಇದರ ಆಡಳಿತ ನಿರ್ದೇಶಕರಾದ ಪಿ ರಾಜೀವ ಆಳ್ವ, ಪೊಸ ಕುರಲ್ ಟಿ ವಿ ಚಾನಲ್ ನ ನಿರ್ದೇಶಕರಾದ ವಿದ್ಯಾಧರ್ ಶೆಟ್ಟಿ, ಪತ್ರಕರ್ತರಾದ ಶ್ರೀ ವಸಂತ ಕೊಣಾಜೆ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಕ್ಷ ಉಸ್ಮಾನ್ ಭಾಗವಹಿಸಲಿದ್ದಾರೆ.
ಬಳಿಕ ವಿದ್ಯಾರತ್ನ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದೆ.
Click this button or press Ctrl+G to toggle between Kannada and English