ಮೈಸೂರು : ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿತ್ತಿಪತ್ರ ಹಿಡಿದವ ಯುವತಿ ತಮಿಳುನಾಡು ಮೂಲದ ಮೈಸೂರು ರಾಮಕೃಷ್ಣ ನಗರದಲ್ಲಿ ಬಾಡಿಗೆ ರೂಂ.ಪಡೆದು ವಾಸಿಸುತ್ತಿರುವ ಛಾಯಾಗ್ರಾಹಕಿ ನಳಿನಿ ಎನ್ನಲಾಗಿದ್ದು,ಇಂದು ಮೈಸೂರು ಜಯಲಕ್ಷ್ಮಿಪುರಂ ಪೊಲೀಸರ ಎದುರು ಹಾಜರಾಗಿದ್ದಾರೆ.
ತಮಿಳುನಾಡು ಮೂಲದವರಾದ ನಳಿನಿ ಮೂಲತಃ ಶ್ರೀಮಂತ ಕುಟುಂಬದವಳು ಎನ್ನಲಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2016ನೇ ಸಾಲಿನಲ್ಲಿ ಪತ್ರಿಕೋದ್ಯಮ ಎಂ.ಎ. ವ್ಯಾಸಂಗ ಮಾಡಿದ್ದಾರೆ. ಅಂದರೆ ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆಗೆ ಕರೆಯದೇ ಬಂದ ಅತಿಥಿ ಎಂದು ಹೇಳಲಾಗಿದೆ. ಇವರ ತಂದೆ ತಮಿಳುನಾಡು ನಿವಾಸಿ ಬಾಲಕೃಷ್ಣ ಎನ್ನಲಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಗುಜರಾತ್ ರಾಜ್ಯದ ಗಾಂಧಿನಗರದಲ್ಲೂ ಉನ್ನತ ಶಿಕ್ಷಣ ಪೂರೈಸಿದ ಈಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ನಲ್ಲಿ ಫೋಟೋಗ್ರಫಿ ಡಿಸೈನ್ ಕುರಿತು ಎಂ.ಡಿಇಎಸ್ ಮಾಡಿದ್ದು, ಮೈಸೂರಿಗೆ ಮರಳಿದ ಬಳಿಕ ಹವ್ಯಾಸಿ ಛಾಯಾಗ್ರಾಹಕಿಯಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ನಳಿನಿ ಫೇಸ್ಬುಕ್ನಲ್ಲಿ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ವಿರುದ್ಧ ಅವಹೇಳನಕಾರಿಯಾಗಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.
ಇಂದು ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರ ಎದುರು ಹಾಜರಾಗಿದ್ದು,ಯಾಕೆ ಈ ರೀತಿಯ ಕೃತ್ಯ ನಡೆಸಿದರು ಎಂಬುದು ಪೊಲೀಸರ ಹೆಚ್ಚಿನ ವಿಚಾರಣೆಯಿಂದ ತಿಳಿದು ಬರಬೇಕಿದೆ.
Click this button or press Ctrl+G to toggle between Kannada and English