ಸಾಮಾನ್ಯ ಕಾರ್ಯಕರ್ತರ ಸಂಘಟನೆಯಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ :ಎನ್. ಯೋಗೀಶ್ ಭಟ್

5:24 PM, Saturday, November 3rd, 2012
Share
1 Star2 Stars3 Stars4 Stars5 Stars
(5 rating, 1 votes)
Loading...

BJPಮಂಗಳೂರು: ಇಂದು ನಗರದ ಸಂಘನಿಕೆತನದಲ್ಲಿ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಾಮಾನ್ಯ ಸಭೆಯನ್ನುದ್ದೇಶಿಸಿ ರಾಜ್ಯ ವಿದಾನ ಸಭೆಯ ಉಪ ಸಭಾಪತಿ ಎನ್. ಯೋಗೀಶ್ ಭಟ್ ರವರು ಮಾತನಾಡಿದರು. ಬಿ.ಜೆ.ಪಿ ತನ್ನ ಸಾಮಾನ್ಯ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವುದು ಎಂದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ವಿವಿದ ಹಗರಣಗಳಲ್ಲಿ ಮುಳುಗಿದ್ದು ನಮ್ಮ ದೇಶವನ್ನು ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನರು ಖಂಡಿತ ಕಾಂಗ್ರೆಸ್ಸನ್ನು ತಿರಸ್ಕರಿಸುತ್ತಾರೆ, ರಾಜ್ಯ ಸರಕಾರವು ಕಳೆದ 50 ವರ್ಷಗಳಲ್ಲಿ ಆಗದೆ ಇರುವಂತಹ ಅಭಿವೃದ್ದಿ ಕಾರ್ಯಗಳನ್ನು 5 ವರ್ಷಗಳಲ್ಲಿ ಮಾಡಿದೆ ಎಂದರು.

ಬಿ.ಜೆ.ಪಿ. ಎಸ್ ಸಿ. ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ವಿರೋಧ ಪಕ್ಷಗಳು ಬಿ.ಜೆ.ಪಿ. ಯನ್ನು ಕೋಮುವಾದಿ ಎಂದು ಬಿಂಬಿಸುತ್ತಿವೆ ಆದರೆ ಬಿ.ಜೆ.ಪಿ. ಕೊಮುವಾದಿಯಾಗುತ್ತಿದ್ದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಆಗುತ್ತಿರಲಿಲ್ಲವೆಂದರು. ಪರಿಶಿಷ್ಟ ಜಾತಿಯವರಿಗೆ ನಮ್ಮ ಸರಕಾರವು ಈ ಹಿಂದಿನ ಯಾವುದೇ ಸರಕಾರಗಳು ಕೊಡದೆ ಇದ್ದ ಸವಲತ್ತುಗಳನ್ನು ನೀಡಿದೆ ಮುಂದಿನ ಚುನಾವಣೆಯಲ್ಲೂ ನಾವು ಬಹುಮತಗಳನು ಗಳಿಸುವುದು ಖಂಡಿತ ಎಂದರು. ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷ ಬಾನು ಪ್ರಕಾಶ್, ಮಂಗಳೂರು ಪಾಲಿಕೆ ಉಪ ಮೇಯರ್ ಅಮಿತ್ ಕಲಾ, ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ವಿದಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English