ಜಾದೂಗಾರ ಕುದ್ರೋಳಿ ಗಣೇಶ್ ಗೆ 2020 ರ ವಿದ್ಯಾರತ್ನ ಪ್ರಶಸ್ತಿ

3:44 PM, Friday, January 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ratnetsava

ಮಂಗಳೂರು : ನಾಡು ನುಡಿ ವೈಭವದ ರತ್ನೋತ್ಸವದ ಸಮಾಪನ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಗೆ 2020 ರ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರತ್ನೋತ್ಸವದ ಪ್ರಶಸ್ತಿಯ ಕಿರೀಟ ಅದು ಸಾಧನೆ ಮಾಡಿದವರನ್ನು ಮಾತ್ರ ಗುರುತಿಸುವ ಕಾರ್ಯಕ್ರಮವಲ್ಲ ಅದು ಸಂಸ್ಥೆಯ ಗೌರವವನ್ನು ಹೆಚ್ಚಿಸುವುದರ ಜೊತೆಗೆ ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹ ನೀಡಿದೆ ಎಂದು ಸಮಾಪನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಎಸ್ ಎಡಪಡಿತ್ತಾಯ ಹೇಳಿದರು.

ratnetsava

ನೂರು ವರ್ಷ ಬದುಕುವ ನಾವೆಲ್ಲರೂ ಪ್ರೀತಿಯಿಂದ, ಸಹನೆಯಿಂದ, ಸಹಬಾಳ್ವೆಯನ್ನುನಡೆಸಲು ನಮ್ಮ ಮಕ್ಕಳಿಗೆ ಕಲಿಸೋಣ, ಅಂತಹ ಕೆಲಸ ರತ್ನೋತ್ಸವದ ಮೂಲಕ ನಡೀತಾ ಇದೆ ಎಂದು ಸಮ್ಮೇಳನಾಧ್ಯಕ್ಷೆ ಹಿರಿಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಹೇಳಿದರು.

ರೋಟರಿ ಜಿಲ್ಲೆ 3181 ಇದರ ಪಿಡಿಜಿ ಯಾದ ಶ್ರೀ ಡಿ ಆರ್ ನಾಗಾರ್ಜುನ, ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಸತ್ತಾರ್, ಕೀರ್ತಿ ಟೈಲ್ಸ್ ಉಡುಪಿ ಇದರ ಆಡಳಿತ ನಿರ್ದೇಶಕರಾದ ಪಿ ರಾಜೀವ ಆಳ್ವ, ಪೊಸ ಕುರಲ್ ಟಿ ವಿ ಚಾನಲ್ ನ ನಿರ್ದೇಶಕರಾದ ವಿದ್ಯಾಧರ್ ಶೆಟ್ಟಿ, ಭಾಸ್ಕರ್ ರೈ ಕುಕ್ಕುವಳ್ಳಿ, ತೋನ್ಸೆ ಪುಸ್ಕಳ್ ಕುಮಾರ್, ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸೌಮ್ಯ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ratnetsava

ಬಳಿಕ ವಿದ್ಯಾರತ್ನ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English