ಮಂಗಳೂರು : ವುಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ತಿರಸ್ಕರಿಸಿ ಮತ್ತು ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಮಂಗಳೂರಿನ ಟೌನ್ ಹಾಲ್ ಮುಂಭಾಗ ಶನಿವಾರ ಬೆಳಗ್ಗೆ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭ ಡಬ್ಲ್ಯೂಐಎಂ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಡಬ್ಲ್ಯೂಐಎಂ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಸಾಮಾಜಿಕ ಹೋರಾಟಗಾರ್ತಿ ನಝ್ಮಾ, ಲೇಖಕಿ ಜ್ಯೋತಿ ಗುರುಪ್ರಸಾದ್, ಎನ್ಡಬ್ಯುಎಫ್ ರಾಷ್ಟ್ರೀಯ ಸಮಿತಿ ಸದಸ್ಯೆ ದಿಲ್ದಾರ್, ಎಸ್ಕೆಎಸ್ಸೆಂನ ಮುಝಾಹಿದಾ, ಸಿಎಫ್ಐನ ಅಮ್ರೀನ್, ಲೇಖಕಿ ನಝ್ಮಾ ನಝೀರ್ ಮತ್ತಿತರರು ಮಾತನಾಡಿದರು.
ರಮ್ಲತ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English