ಮಡಿಕೇರಿ : ಕೊಡಗು ಜಿಲ್ಲೆಯನ್ನು ಅಪರಾಧ ಮತ್ತು ಅಪಘಾತ ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸರು ಸಕಲ ಪ್ರಯತ್ನ ಕೈಗೊಳ್ಳುತ್ತಿದ್ದು ಪೊಲೀಸರೊಂದಿಗೆ ಈ ನಿಟ್ಟಿನಲ್ಲಿ ನಾಗರಿಕರ ಸಹಕಾರ ಕೂಡ ಅತ್ಯಗತ್ಯ ಎಂದು ಮಡಿಕೇರಿ ವಿಭಾಗದ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಮನವಿ ಮಾಡಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಕಾನೂನು ಪರಿಪಾಲನೆ ವಿಚಾರ ಕುರಿತ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್, ಪೊಲೀಸರು ಎಂದರೆ ಜನರಲ್ಲಿರುವ ಭಯದ ಭಾವನೆ ಇನ್ನೂ ಹೋಗಿಲ್ಲ. ಪೊಲೀಸ್ ಠಾಣೆಗೆ ಅಪರಾಧ ಪ್ರಕರಣದ ವರದಿಗೋಸ್ಕರವೇ ಅಪರಾಧ ಸಂಭವಿಸಿದಾಗ ಜನರು ಬರುತ್ತಾರೆಯೇ ವಿನಾ ಇತರರಂತೆ ಪೊಲೀಸರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಳ್ಳಲು ಜನ ಹಿಂಜರಿಸುತ್ತಾರೆ. ಈ ಭಾವನೆ ತೊಲಗಬೇಕು. ಪೊಲೀಸರು ಹೇಗೆ ಜನಸ್ನೇಹಿಯೋ ಹಾಗೇ ಜನರು ಕೂಡ ಪೊಲೀಸರೊಂದಿಗೆ ಆತ್ಮೀಯ ಸಂಬಂಧ ಹೊಂದುವಂತಾಗಬೇಕೆಂದು ಮನವಿ ಮಾಡಿದರು.
ಕೊಡಗಿನಲ್ಲಿ ಎಲ್ಲಾ ಕಡೆಗಳಂತೆ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಮೆಯಿದೆ. ಹೀಗಿದ್ದರೂ ಸ್ಥಳೀಯರ ಸಹಕಾರದಿಂದ ಅನೇಕ ಅಪರಾಧ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಎಲ್ಲರಂತೆ ಪೊಲೀಸರಲ್ಲೂ ಒಳ್ಳೆಯವರು , ಕೆಟ್ಟವರು ಇದ್ದೇ ಇರುತ್ತಾರೆ. ಹೀಗಿರುವಾಗ ಪೊಲೀಸರು ಮಾಡುವ ಉತ್ತಮ ಕೆಲಸಕ್ಕೆ ನಾಗರಿಕ ಸಮಾಜದಿಂದ ಶ್ಲಾಘನೆ ವ್ಯಕ್ತವಾಗುವುದು ಪ್ರಶಂಸನೀಯ ಎಂದು ಅಭಿಪ್ರಾಯವ್ಯಕ್ತಪಡಿಸಿದ ದಿನೇಶ್ ಕುಮಾರ್, ಕಾನೂನನ್ನು ಪರಿಪಾಲಿಸಬೇಕು ಎಂಬ ಮನೋಭಾವ ಪ್ರತೀಯೋವ೯ರ ಮನದಲ್ಲಿಯೂ ಸದಾ ಕಾಲ ಜಾಗ?ತರಾಗಿರಬೇಕು. ಪೊಲೀಸರ ಭಯದಿಂದ ಮಾತ್ರ ಸಾರಿಗೆ ನಿಯಮ ಪಾಲಿಸದೇ ನಿಯಮ ಉಲ್ಲಂಘಿಸಿದ್ದಲ್ಲಿ ತನಗೆ ಆಗಬಹುದಾದ ಅಪಾಯವನ್ನೂ ಮನಗಾಣುವಂತಾಗಬೇಕು. ಜನರ ಹಿತಕ್ಕಾಗಿಯೇ ಎಲ್ಲಾ ಕಾನೂನುಗಳು ಅನುಷ್ಟಾನಗೊಂಡಿದ್ದು ಪೊಲೀಸರು ಇಂಥ ಕಾನೂನನ್ನು ಸರಿಯಾಗಿ ಜನರು ಪಾಲಿಸುವಂತೆ ಮಾಡುತ್ತಿದ್ದಾರೆಯೇ ವಿನಾ ಪೊಲೀಸರು ಜನರನ್ನು ಬೆದರಿಸಲು ಕಾನೂನು ಉಲ್ಲಂಘಿಸಿದಪರಿಗೆ ದಂಡ ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮನೆಯಿಂದ ದೀಘ೯ ಸಮಯ ಹೊರಹೋಗುವಾಗ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇ ಆದಲ್ಲಿ ಮನೆ ಕಳ್ಳತನದಂಥ ಪ್ರಕರಣ ತಪ್ಪಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದ ದಿನೇಶ್ ಕುಮಾರ್, ಮಡಿಕೇರಿಯಲ್ಲಿ ಯುವಪೀಳಿಗೆ ಮಧ್ಯದೊಂದಿಗೆ ಮಾದಕ ವ್ಯಸನಿಗಳಾಗುತ್ತಿರುವ ಪ್ರಕರಣಗಳ ಬಗ್ಗೆ ಅಧಿಕ ಪ್ರಮಾಣದಲ್ಲಿ ದೂರುಗಳು ಬರುತ್ತಿದ್ದು ಪೊಲೀಸರು ಇಂಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾದಕ ದ್ಯವ್ಯ ಸರಬರಾಜು ಮಾಡುತ್ತಿರುವ ಜಾಲವನ್ನು ಬಗ್ಗುಬಡಿಯಲು ಕೊಡಗು ಪೊಲೀಸ್ ಸನ್ನದ್ದರಾಗಿದ್ದಾರೆ ಎಂದು ಹೇಳಿದರು.
ಮಡಿಕೇರಿಯಲ್ಲಿ ವಾಹನ ನಿಲುಗಡೆ, ಸಂಚಾರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜನ ಸಂಪಕ೯ ಸಭೆ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ. ತಮ್ಮಲ್ಲಿರುವ ಸಲಹೆಗಳನ್ನು ನಾಗರಿಕರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಅನೇಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಾಧ್ಯವಿದೆ ಎಂದು ಡಿವೈಎಸ್ಪಿ ದಿನೇಶ್ ಕುಮಾರ್ ತಿಳಿಸಿದರು.
ಕೊಡಗು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವದಲ್ಲದೇ, ಕೊಡಗನ್ನು ಅಪರಾಧ ಮತ್ತು ಅಪಘಾತ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿಯೂ ವಿವಿಧ ಕಾಯ೯ಯೋಜನೆ ಜಾರಿಗೊಳಿಸಲು ಚಿಂತನೆಯನ್ನು ಪೊಲೀಸ್ ವರಿಷ್ಟಾಧಿಕಾರಿಗಳು ಹೊಂದಿದ್ದಾರೆ ಎಂದೂ ದಿನೇಶ್ ಕುಮಾರ್ ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಕೆ.ಜಗದೀಶ್ ಪ್ರಶಾಂತ್, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ, ಖಚಾಂಚಿ ಪ್ರಸಾದ್ ಗೌಡ, ರೋಟರಿ ವಲಯ ಕಾಯ೯ದಶಿ೯ ಅನಿಲ್ ಎಚ್.ಟಿ. ಮಿಸ್ಟಿ ಹಿಲ್ಸ್ ಪ್ರಮುಖರಾದ ಎ.ಕೆ.ವಿನೋದ್ ಕುಶಾಲಪ್ಪ, ಕೆ.ಡಿ.ದಯಾನಂದ್, ಬಿ.ಕೆ.ರವೀಂದ್ರ ರೈ, ಜಿ.ಆರ್.ರವಿಶಂಕರ್, ಮಧುಸೂದನ್, ಅನಿತಾ ಪೂವಯ್ಯ ಸೇರಿದಂತೆ ಮಿಸ್ಟಿ ಹಿಲ್ಸ್ ಸದಸ್ಯರು ಡಿವೈಎಸ್ಪಿ ಜತೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English