ಅಪರಾಧ ಶೋಧ ಕಾರ್ಯದಲ್ಲಿ ಹೊಸ ಯುಗ, ಪೊಲೀಸ್ ಇಲಾಖೆಗೆ ತಿರುವು ನೀಡುವ ದಿನ : ಗೃಹ ಸಚಿವ ಬಸವರಾಜ ಬೊಮ್ಮಾಯಿ

Tuesday, July 13th, 2021
Bommai

ಬೆಂಗಳೂರು: ಕರ್ನಾಟಕ ಪೊಲೀಸ್ ಅಪರಾಧ ಶೋಧ ಕಾರ್ಯದಲ್ಲಿ ಹೊಸ ಯುಗ ಆರಂಭವಾಗಲಿದೆ. ಇದುವರೆಗೆ ಅಪರಾಧ ತಡೆ ಮತ್ತು ನಿಯಂತ್ರಣದಲ್ಲಿ ಮಾಡಿದ್ದೇವೆ. ಇನ್ನು ಮುಂದೆ ಅಪರಾಧ ಶೋಧ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ. ಇವು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸದ ನುಡಿಗಳು. ಮಂಗಳವಾರ ಬೆಂಗಳೂರಿನ ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಪೊಲೀಸ್ ಇಲಾಖೆಯ ಸಬಲೀಕರಣಕ್ಕೆ ಹೊಸ ಯೋಜನೆಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಈ ವಿಶ್ವಾಸದ ನುಡಿಗಳನ್ನು ಆಡಿದರು. ಪೊಲೀಸ್ […]

ಕೋವಿಡ್-19 ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ

Monday, June 7th, 2021
Yunani

ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗುಣಪಡಿಸಲಾಗುತ್ತದೆ ಎಂಬ ಸುಳ್ಳು ಆಶ್ವಾಸನೆ ನೀಡುವುದು ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹವರ ವಿರುದ್ಧ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಗೆ ಸಾರ್ವಜನಿಕರು ದೂರು ನೀಡಿದಲ್ಲಿ ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್-19 ಎರಡನೆ ಅಲೆ ತೀವ್ರವಾಗಿ ಪ್ರಸರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜ್ವರ, ನೆಗಡಿ, ಕೆಮ್ಮು ಮತ್ತು ಮೈ-ಕೈ ನೋವಿನಂತಹ ಲಕ್ಷಣಗಳಿಂದ […]

ಮಗಳ ಕೃತ್ಯ ಅಕ್ಷಮ್ಯ ಅಪರಾಧ, ಅವಳ ತಪ್ಪಿಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ : ಅಮೂಲ್ಯ ತಂದೆ

Friday, February 21st, 2020
amulya

ಚಿಕ್ಕಮಗಳೂರು : ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನಾ ವಿರುದ್ಧ ಆಕೆಯ ತಂದೆ ಓಸ್ವಲ್ಡ್ ನರೋನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳ ಕೃತ್ಯ ಅಕ್ಷಮ್ಯ ಅಪರಾಧ. ಅವಳ ತಪ್ಪಿಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನರೋನಾ ಹೇಳಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದ ಶಿವಪುರದಲ್ಲಿ ಮಾತನಾಡಿರುವ ಅವರು, “ಅಮೂಲ್ಯ ನನ್ನ ಮಾತನ್ನು ಕೇಳುತ್ತಿರಲಿಲ್ಲ. ನನಗೆ ಆರೋಗ್ಯ ಸರಿಯಿಲ್ಲ ಮನೆಗೆ ಬಾ ಎಂದು ಹೇಳಿದ್ದರೂ ಬಂದಿರಲಿಲ್ಲ. ಅವಳು ಯಾಕೆ ಈ ರೀತಿ ಹೇಳಿದ್ದಾಳೆ ಎಂದು ಗೊತ್ತಿಲ್ಲ. […]

ಕೊಡಗನ್ನು ಅಪರಾಧ, ಅಪಘಾತ ಮುಕ್ತ ಜಿಲ್ಲೆಯಾಗಿಸಲು ಪೊಲೀಸರೊಂದಿಗೆ ಸಹಕರಿಸಿ : ದಿನೇಶ್ ಕುಮಾರ್

Thursday, January 23rd, 2020
dinesh-kumar

ಮಡಿಕೇರಿ : ಕೊಡಗು ಜಿಲ್ಲೆಯನ್ನು ಅಪರಾಧ ಮತ್ತು ಅಪಘಾತ ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸರು ಸಕಲ ಪ್ರಯತ್ನ ಕೈಗೊಳ್ಳುತ್ತಿದ್ದು ಪೊಲೀಸರೊಂದಿಗೆ ಈ ನಿಟ್ಟಿನಲ್ಲಿ ನಾಗರಿಕರ ಸಹಕಾರ ಕೂಡ ಅತ್ಯಗತ್ಯ ಎಂದು ಮಡಿಕೇರಿ ವಿಭಾಗದ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಮನವಿ ಮಾಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಕಾನೂನು ಪರಿಪಾಲನೆ ವಿಚಾರ ಕುರಿತ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್, ಪೊಲೀಸರು ಎಂದರೆ ಜನರಲ್ಲಿರುವ ಭಯದ ಭಾವನೆ ಇನ್ನೂ ಹೋಗಿಲ್ಲ. […]