ಮಗಳ ಕೃತ್ಯ ಅಕ್ಷಮ್ಯ ಅಪರಾಧ, ಅವಳ ತಪ್ಪಿಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ : ಅಮೂಲ್ಯ ತಂದೆ

2:16 PM, Friday, February 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

amulya

ಚಿಕ್ಕಮಗಳೂರು : ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನಾ ವಿರುದ್ಧ ಆಕೆಯ ತಂದೆ ಓಸ್ವಲ್ಡ್ ನರೋನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳ ಕೃತ್ಯ ಅಕ್ಷಮ್ಯ ಅಪರಾಧ. ಅವಳ ತಪ್ಪಿಗೆ ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನರೋನಾ ಹೇಳಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಶಿವಪುರದಲ್ಲಿ ಮಾತನಾಡಿರುವ ಅವರು, “ಅಮೂಲ್ಯ ನನ್ನ ಮಾತನ್ನು ಕೇಳುತ್ತಿರಲಿಲ್ಲ. ನನಗೆ ಆರೋಗ್ಯ ಸರಿಯಿಲ್ಲ ಮನೆಗೆ ಬಾ ಎಂದು ಹೇಳಿದ್ದರೂ ಬಂದಿರಲಿಲ್ಲ. ಅವಳು ಯಾಕೆ ಈ ರೀತಿ ಹೇಳಿದ್ದಾಳೆ ಎಂದು ಗೊತ್ತಿಲ್ಲ. ನಾನು ಅಜ್ಞಾನಿ ಅಲ್ಲ, ಅವಳಿಗೆ ತಿಳುವಳಿಕೆ ಹೇಳಿದ್ದೆ. ಪ್ರೊ. ಸಿದ್ದಲಿಂಗಯ್ಯರಿಂದಲೂ ತಿಳುವಳಿಕೆ ಹೇಳಿಸಿದ್ದೆ. ಆದರೂ ಅವಳು ಯಾರ ಮಾತನ್ನೂ ಕೇಳಿಲ್ಲ,” ಅಂತ ಕಿಡಿಕಾರಿದ್ದಾರೆ.

“ಅವಳಿಗೆ 18 ವರ್ಷ ತುಂಬಿದೆ ಅಷ್ಟೇ, ಆದರೆ ಅಪ್ರಬುದ್ಧತೆಯಿಂದ ಮಾತನಾಡಿದ್ದಾಳೆ. ಅವಳ ಪರ ನಾನು ಕಾನೂನು ಹೋರಾಟ ಮಾಡಲ್ಲ. ಕಾನೂನಿನಲ್ಲಿ ಏನು ಆಗಬೇಕು ಆಗಲಿ. ಈಗಲಾದರೂ ಅವಳು ಜೈಲಿನಲ್ಲಿ ಕುಳಿತು ಕಾನೂನಿನ ಬಗ್ಗೆ ತಿಳಿದುಕೊಳ್ಳಲಿ. ಐದಾರು ದಿನ ಆಯ್ತು, ಅವಳಿಗೆ ನಾನು ಕರೆ ಮಾಡಿಲ್ಲ. ಅಮೂಲ್ಯಾಗೆ ಏನು ಹೇಳಿದರೂ ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ಅವಳನ್ನು ಕ್ಷಮಿಸುವುದೂ ಇಲ್ಲ,” ಎಂದು ಹೇಳಿದ್ದಾರೆ.

“ಭಾರತೀಯರಿಗೆ, ಹಿರಿಯರಿಗೆ, ಯಾರಿಗೆಲ್ಲ ನೊವುಂಟು ಮಾಡಿದೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಯಾರ ಜೊತೆ ಸೇರಿ ಹೀಗೆ ಮಾತಾನಾಡುತ್ತಿದ್ದಾಳೋ ನನಗೆ ಗೊತ್ತಿಲ್ಲ. ತುಂಬಾ ತಿಳಿದುಕೊಂಡು ಜ್ಞಾನಿಯಾಗಿದ್ದಳು. ಯಾಕೆ ಹೀಗೆ ಮಾತಾನಾಡಿದ್ದಾಳೋ ನನಗೆ ಗೊತ್ತಿಲ್ಲ” ಎಂದರು.

“ಅಮೂಲ್ಯಗೆ ಯಾರೋ ಪ್ರಚೋದನೆ ನೀಡಿದ್ದಾರೆ. ಹಾಗಾಗಿ ಆಕೆ ಈ ರೀತಿಯ ಹೇಳಿಕೆ ನೀಡಿದ್ದಾಳೆ. ನಿನ್ನೆ ಮಾತಿನಿಂದ ಅವಳು ಬಚಾವಾಗುವ ಸ್ಥಿತಿ ಇರಲಿಲ್ಲ. ಸ್ವಲ್ಪ ದಿನದಲ್ಲೇ ಸಿಕ್ಕಿ ಬೀಳುತ್ತಾಳೆ ಎಂದುಕೊಂಡಿದ್ದೆ. ನಿನಗೆ ವಿಧಿಯೇ ಪಾಠ ಕಲಿಸುತ್ತೆ ಎಂದಿದ್ದೆ. ಅದೇ ರೀತಿ ಆಗಿದೆ. ನನ್ನ ಮನಸ್ಸಿಗೆ ಬೇಜಾರು ಮಾಡಿದವರು ಸಾವನ್ನಪ್ಪಿದ್ದಾರೆ. ಕೆಲವರು ಚಾಪೆಯಲ್ಲೇ ಕೊಳೆಯುತ್ತಿದ್ದಾರೆ. ಇನ್ನೂ ಕೆಲವು ನನ್ನ ಕಣ್ಣು ಮುಂದೆಯೇ ಕಷ್ಟ ಅನುಭವಿಸುತ್ತಿದ್ದಾರೆ. ಈಗ ನನ್ನ ಮಗಳು ಕೂಡ ಅದನ್ನೇ ಅನುಭವಿಸುತ್ತಿದ್ದಾಳೆ” ಎಂದು ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English