ಮಡಿಕೇರಿ : ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಕತ೯ವ್ಯ ನಿರ್ವಹಿಸಿ ನಿವೃತರಾದ ಸೈನಿಕನನ್ನು ಸನ್ಮಾನಿಸಿ ಗೌರವಿಸಿದ ಭಾವಾನಾತ್ನಕ ಕ್ಷಣಗಳಿಗೆ ನಗರದಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮ ಸಾಕ್ಷಿಯಾಯಿತು.
ಕೊಡಗಿನ ಖ್ಯಾತ ಇತಿಹಾಸಕಾರ ದಿ.ಡಿ.ಎನ್.ಕೃಷ್ಣಯ್ಯ ಅವರ ಪುತ್ರಿ ಕುಂಬೂರು ಗ್ರಾಮ ನಿವಾಸಿ ಇಂದಿರಾ ಮತ್ತು ಸತ್ಯನಾರಾಯಣ ದಂಪತಿ ಪುತ್ರರಾಗಿರುವ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್ ಭಾರತೀಯ ಸೇನೆಯ ಸಿಗ್ನಲ್ಸ್ ವಿಭಾಗದಲ್ಲಿ ದೇಶದ ವಿವಿದೆಡೆ 30ವಷ೯ಗಳ ಕಾಲ ಕರ್ತವ್ಯ ನಿರ್ವಹಿಸಿದರು. ಇತ್ತೀಚಿಗಷ್ಟೇ ರಾಜಾರಾಮ್ ನಿವೃತರಾಗಿ ಸ್ವಗ್ರಾಮಕ್ಕೆ ಹಿಂದಿರುಗಿದರು.
ಇದೇ ಸಂದರ್ಭ ಮಡಿಕೇರಿಯ ಓಂಕಾರ ಸದನದಲ್ಲಿ ರಾಜಾರಾಮ್ ಸಹೋದರಿಯಾಗಿರುವ ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ ನ ತಾರಾ ಮತ್ತು ಗೋಪಾಲ ಭಟ್ ದಂಪತಿಯ ಪುತ್ರ ನಿಖಿಲ್ ಭಟ್ ಹಾಗೂ ಸೌಮ್ಯಶ್ರೀ ವಿವಾಹ ಆರತಕ್ಷತೆ ಏಪ೯ಡಾಗಿತ್ತು.
ಆರತಕ್ಷತೆ ಕಾರ್ಯಕ್ರಮದಲ್ಲಿ ನಿವೃತ ಸೇನಾಧಿಕಾರಿ ರಾಜಾರಾಮ್ ಹಾಗು ಸೇನೆಗೆ ಮಗನನ್ನು ಸೇರ್ಪಡೆಗೊಳಿಸಿದ್ದ ಇಂದಿರಾ ಸತ್ಯನಾರಾಯಣ, ಪತ್ನಿ ಜಿ.ಆರ್. ಸವಿತಾ ಅವರನ್ನು ರಾಜ್ಯ ಪೊಲೀಸ್ ಇಲಾಖೆಯ ನಿವೃತ ಮಹಾ ನಿದೇ೯ಶಕ ತಿಮ್ಮಪ್ಪಯ್ಯ ಮಡಿಯಾಳ್ , ಸುಂಟಿಕೊಪ್ಪದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಬಂಧು ಬಳಗದವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್, 3 ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಜೀವನದಲ್ಲಿ ಸಾಥ೯ಕತೆ ಮೂಡಿಸಿದೆ. ಸಾಕಷ್ಟು ಸವಾಲುಗಳನ್ನು ಹಲವಾರು ಹಂತಗಳಲ್ಲಿ ಎದುರಿಸುವ ಭಾರತೀಯ ಯೋಧನಿಗೆ ಸಂಸಾರದ ಸುಖಕ್ಕಿಂತ ದೇಶದ ರಕ್ಷಣೆಯ ಚಿಂತೆಯೇ ಹೆಚ್ಚಾಗಿರುತ್ತದೆ. ಹೀಗಾಗಿ ಸೈನಿಕನು ಕರ್ತವ್ಯ ನಿವ೯ಹಿಸುವ ಸಂದರ್ಭ ಆತನ ಕುಟುಂಬ ವರ್ಗದವರನ್ನು ಕಾಳಜಿಯಿಂದ ಆತನ ಗ್ರಾಮಸ್ಥರು ನೋಡಿಕೊಳ್ಳಬೇಕಾಗಿದೆ. ತನ್ನ ಸ್ವಗ್ರಾಮವಾದ ಕುಂಬೂರು ಗ್ರಾಮಸ್ಥರು ತನ್ನ ಪೋಷಕರನ್ನು ಅವರ ಹಿರಿ ವಯಸ್ಸಿನಲ್ಲಿ ತನ್ನ ಗೈರುಹಾಜರಿಯಲ್ಲಿ ಅತ್ಯುತ್ತಮವಾಗಿ ನೋಡಿಕೊಂಡದ್ದು ತನಗೆ ಹೆಮ್ಮೆ ತಂದಿದೆ ಎಂದರು.
ರಾಜಾರಾಮ್ ಸೇನಾ ಕರ್ತವ್ಯದ ಬಗ್ಗೆ ಪರಿಚಯಿಸಿದ ಈ ಕಾಯ೯ಕ್ರಮ ಸಂಚಾಲಕ ಪತ್ರಕರ್ತ ಅನಿಲ್ ಎಚ್.ಟಿ. ,ಜಗತ್ತಿನ ಅತ್ಯಂತ ಕಠಿಣ ಹಿಮಶಿಕರದ ಯುದ್ಜಭೂಮಿಯಾದ ಸಿಯಾಚನ್ , ದ್ರಾಸ್, ಕಾಗಿ೯ಲ್, ಟೈಗರ್ ಹಿಲ್, ಪುಲ್ವಾಮ ಸೇರಿದಂತೆ ದೇಶದ ಬಹುತೇಕ ಕಡೆ ೩೦ ವಷ೯ಗಳಲ್ಲಿ ರಾಜಾರಾಮ್ ಸೇನಾ ಕತ೯ವ್ಯ ನಿರ್ವಹಿಸಿದ್ದರು. ಅಸ್ಸಾಂನಲ್ಲಿ ಭಯೋತ್ಪಾದಕರ ಧಾಳಿ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದರು. ರಾಜಾರಾಮ್ ಸೇನಾ ಸೇವೆಯನ್ನು ಕುಟುಂಬಸ್ಥರೊಂದಿಗೆ ಗೆಳೆಯರೂ ಪರಿಗಣಿಸಿ ಸನ್ಮಾನಿಸುವಂತಾದದ್ದು ಸೇನಾ ಜಿಲ್ಲೆ ಕೊಡಗಿನ ಪಾಲಿಗೆ ಹೆಮ್ಮೆ ತಂದಿದೆ ಎಂದರು. ಸೈನಿಕನೋವ೯ ಸೇನಾ ಕತ೯ವ್ಯದಿಂದ ನಿವೃತ್ತನಾಗಿ ಮರಳಿ ಸ್ವಗ್ರಾಮಕ್ಕೆ ಬಂದ ಸಂದರ್ಭ ಆತನನ್ನು ಸೂಕ್ತ ರೀತಿಯಲ್ಲಿ ಸನ್ಮಾನಿಸಿ ಗೌರವಿಸುವುದು ಕೊಡಗಿನಲ್ಲಿ ಸಂಪ್ರದಾಯವಾಗಬೇಕೆಂದೂ ಅನಿಲ್ ಎಚ್.ಟಿ. ಆಶಿಸಿದರು.
ಈ ಸಂದಭ೯ ನಿವೃತ್ತ ಮೇಜರ್ ವೆಂಕಟಗಿರಿ, ಏರ್ ಪೋಸ್ಟ್ ನ ನಿವೃತ್ತ ಸಾರ್ಜೆಂಟ್ ಕಿಗ್ಗಾಲು ಗಿರೀಶ್, ರಾಜಾರಾಮ್ ಅಕ್ಕಂದಿರಾದ ಆಶಾ, ಶೀಲಾ, ತಾರಾ, ಗೌರಿ, ಭಾವಂದಿರಾದ ಎಚ್.ಎಸ್.ತಿಮ್ಮಪ್ಪಯ್ಯ, ಕೆ.ಗೋಪಾಲ್ ಭಟ್, ರಾಜಾರಾಮ್ ಕೆ.ಇ.ಟಿ. ಹಾಜರಿದ್ದರು.
ನಿವೃತ್ತನಾಗಿ ಸ್ವಗ್ರಾಮಕ್ಕೆ ಬಂದ ಸೈನಿಕನನ್ನು ವಿವಾಹ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದ್ದು ಬಂಧುಬಳಗದವರ ಶ್ಲಾಘನೆಗೆ ಪಾತ್ರವಾಯಿತು.
Click this button or press Ctrl+G to toggle between Kannada and English