ಮಡಿಕೇರಿ : ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಖಾಸಗೀಕರಣ ಪ್ರಸ್ತಾಪ ವಿರೋಧಿಸಿ ಭಾರತೀಯ ಜೀವ ವಿಮಾ ನಿಗಮ ಮಡಿಕೇರಿ ಶಾಖೆಯ ಸಿಬ್ಬಂದಿಗಳು ಹಾಗೂ ಪ್ರತಿನಿಧಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಲ್‌ಐಸಿ ಪ್ರಧಾನ ಕಚೇರಿರು ಒಂದು ಗಂಟೆ ಕಾಲ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಎಲ್‌ಐಸಿ ಖಾಸಗೀಕರಣ ಮಾಡದಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಭಾರತೀಯ ಜೀವವಿಮಾ ನಿಗಮದ ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಬಿ.ಪ್ರಸನ್ನ, ಎಲ್‌ಐಸಿ ಯಿಂದ ಬರುವ ಶೇ.5 ರಷ್ಟು ಲಾಭಂಶವನ್ನು ಡೆವಿಡೆಂಟ್ ರೂಪದಲ್ಲಿ ನೀಡುವ ಮೂಲಕ ಸರಕಾರದ ಪ್ರತಿಯೊಂದು ಹಣಕಾಸಿನ ಬೇಡಿಕೆಯನ್ನು ಭಾರತೀಯ ಜೀವವಿಮಾ ನಿಗಮ ಪೂರೈಸುತ್ತಾ ಬಂದಿದೆ. ಆದರೆ ಲಾಭದಾಯಕವಾಗಿ ನಡೆಯುತ್ತಿರುವ ಈ ಸಂಸ್ಥೆಯನ್ನು ಖಾಸಗೀರಕಣ ಮಾಡಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀವವಿಮಾ ನೌಕರರ ಒಕ್ಕೂಟದ ಅಧ್ಯಕ್ಷ ಶಶಿಕಿರಣ್, ಕಾರ್ಯದರ್ಶಿ ಎಂ.ಎಂ.ಪ್ರವೀಣ್, ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ನಟರಾಜ್, ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಚಾಮ, ನಿರ್ದೇಶಕ ಪ್ರೇಮ್ ಕುಮಾರ್, ಎಸ್.ಸಿ.ಸತೀಶ್ ಮತ್ತಿತರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English